ಬಕ್ರಿÃದ್ ಹಬ್ಬ ಶಾಂತಿಯುತವಾಗಿ ಆಚರಿಸಿ

0
8
loading...

ರಬಕವಿ-ಬನಹಟ್ಟಿ: ಮುಂಬರುವ ಬಕ್ರಿದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸ್ಥಳೀಯ ಸಿಪಿಐ ಬಿ.ಎಸ್.ಮಂಟೂರ ತಿಳಿಸಿದರು.
ಅವರು ಶನಿವಾರ ಸಿಪಿಐ ಕಾರ್ಯಾಲಯದಲ್ಲಿ ನಡೆದ ಶಾಂತಿ ಪಾಲನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಿಎಸ್‌ಐ ಎಸ್.ಎಂ. ಅವಜಿ ಮಾತನಾಡಿ, ಹಬ್ಬಗಳನ್ನು ಕೋಮ ಸೌಹಾರ್ದತೆಯಿಂದ, ಸಹೋದರ ಮನೋಭಾವನೆಯಿಂದ ಆಚರಿಸಬೇಕು. ಹಬ್ಬಗಳ ಸಂದರ್ಭದಲ್ಲಿ ಯಾವುದೆ ವೈಯಕ್ತಿಕ ದ್ವೆÃಷ ಬೇಡ. ಸ್ಥಳೀಯ ಸಾರ್ವಜನಿಕರು ಯಾವುದೆ ಅಹಿತಕರ ಘಟನೆ ನಡೆಯದಂತೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಂಕರ ಜಾಲಿಗಿಡದ ಮಾತನಾಡಿ, ಸ್ಥಳೀಯ ಗಾಂಧಿ ವೃತ್ತದ ಬಳಿ ಅಳವಡಿಸಲಾದ ಸಿಸಿ ಕ್ಯಾಮರಾ ಬಂದಾಗಿದ್ದು, ಸಂಬಂಧಪಟ್ಟ ಇಲಾಖೆಯವರು ಕೂಡಲೇ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಸಿರಾಜ ಮಳಲಿ ಮಾತನಾಡಿ, ಬೆಳಗ್ಗೆ ಸ್ಥಳೀಯ ಪೆಂಡಾರಿ ಗಲ್ಲಿ ಮತ್ತು ಲಕ್ಷಿ÷್ಮ ನಗರದ ಬಡಾವಣೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು. ಬೆಳಗ್ಗೆ ೯ರಿಂದ ೧೦ ಒಳಗೆ ಪ್ರಾರ್ಥನೆ ಮುಕ್ತಾಯಗೊಳ್ಳಲಿದೆ ಎಂದರು. ಅಂiÀÄÆಬಖಾನ್ ಹೊರಟ್ಟಿ, ಬಸವಪ್ರಭು ಹಟ್ಟಿ ಮಾತನಾಡಿದರು.
ಶಾಂತಿ ಪಾಲನಾ ಸಭೆಯ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆಯ ಅಧಿಕಾರಿ ಮಾಹಾಲಿಂಗ ಮುಗಳಖೋಡ ಇದ್ದರು. ಸಭೆಯಲ್ಲಿ ಪ್ರಕಾಶ ಮಂಡಿ, ಓಂಪ್ರಕಾಶ ಬಾಗೇವಾಡಿ, ಅಬೂಬಕರ್ ಗುರ್ಲಹೊಸೂರ, ಡಾ.ಅಕ್ಬರ್ ತಾಂಬೋಳಿ, ರಾಜು ಕೊಳ್ಳೊಳ್ಳಿ, ಬಸವರಾಜ ಶಿರೋಳ, ಮುರಗೇಶ ಮಗದುಮ್, ಸಿದ್ದು ಭಜಂತ್ರಿ, ಮಹಾಂತೇಶ ಹೂಗಾರ, ಹಾರೂನ ತಾಂಬೋಳಿ ಇದ್ದರು.

loading...