ಬಕ್ರೀದ್ ಹಬ್ಬ: ಕೊಡಗು ಸಂತ್ರಸ್ತರಿಗೆ ದೇಣಿಗೆ ಸಂಗ್ರಹ

0
6
loading...

ಕನ್ನಡಮ್ಮ ಸುದ್ದಿ-ಬಂಕಾಪುರ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಪ್ರತಿವರ್ಷ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲೀಂ ಬಾಂಧವರು ಸತತ ಮಳೆ ಸುರಿಯುತ್ತಿರುವ ಕಾರಣ ಅವರ ಸಮಿಪದ ಮಸೀದಿಗಳಲ್ಲಿಯೇ ಸಾಮೂಹಿಕ ಪ್ರಾರ್ಥನೆ ಗೈದು ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳನ್ನು ವಿನಿಮಯಮಾಡಿಕೊಂಡರು. ಈ ಸಂದರ್ಭದಲ್ಲಿ ಮುಸ್ಲೀಂ ಭಾಂಧವರು ಕೊಡಗು ಕೇರಳ ನೇರೆ ಹಾವಳಿ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದರು. ಮೈನುದ್ದೀನ ಖತೀಬ, ಅಯೂಬಖಾನ ಪಠಾಣ, ಮಹಮ್ಮದಜಾಫರ ಲಾಲಾನವರ, ಕಲಂದರ ಜಂಗಳಿ, ಮುನ್ನಾ ಗುಲ್ಮಿ, ಇಸ್ಮಾಯಿಲ್‍ಸಾಬ ದೊಡ್ಡಮನಿ, ಇಂಬ್ರಾಹಿಂಸಾಬ ಪಂಚಖಾನ, ಖ್ವಾಜಾವೈಸ್ ಖಲೀಫಾ, ಮಕ್ಬೂಲಸಾಬ ದುಕಾನದಾರ, ನೂರಅಹ್ಮದ ಡೊರಳ್ಳಿ, ಜಮಿರಅಹ್ಮದ ಹಲ್ಡೆವಾಲೆ, ಮಹಮ್ಮದರಫೀಕ್ ಬಡಿಗೇರ, ಅನ್ವರಸಾಬ ಖಲೀಫಾ, ಅಜರುದ್ದೀನ ಮತ್ತೂರ, ಖಾಜಾಸಾಬ ಲಕ್ಷ್ಮೇಶ್ವರ, ಖಾದರಗೌಸ್ ಖುರ್ಸಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...