ಬಡಕುಂದ್ರಿ ಕಾಲೇಜ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0
26
loading...

ಬಡಕುಂದ್ರಿ ಕಾಲೇಜ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕನ್ನಡಮ್ಮ ಸುದ್ದಿ-ಘಟಪ್ರಭಾ: ಸ್ಥಳೀಯ ಬಡಕುಂದ್ರಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಳ್ಳೂರಿನಲ್ಲಿ ನಡೆದ ಸನ್ ೨೦೧೮-೧೯ ನೇ ಶೈಕ್ಷಣಿಕ ಸಾಲಿನ ಮೂಡಲಗಿ ವಲಯ ಮಟ್ಟದ ಕ್ರಿÃಡಾ ಕೂಟದಲ್ಲಿ ವಿವಿಧ ಕ್ರಿÃಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಜಯಶಾಲಿಯಾಗಿದ್ದಾರೆ.
ಬಾಲಕ ಮತ್ತು ಬಾಲಕಿಯರ ಟೆನಿಕ್ವಾಯಟ್‌ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯಾದ ಮಲ್ಲಪ್ಪಾ ತಿಪ್ಪಾಣಗೊಳ ಕಬ್ಬಡ್ಡಿಯಲ್ಲಿ ತೋರಿಸಿದ ಪ್ರತಿಭೆಗೆ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಇತನನ್ನು ಆಯ್ಕೆ ಮಾಡಿಲಾಯಿತು. ಸಂಸ್ಥೆಯ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಪ್ರಿÃತಿ ಕೌಜಲಗಿ ವೈಯಕ್ತಿಕ ಕ್ರಿÃಡೆಗಳಾದ ಉದ್ದಜಿಗಿತ, ೪೦೦ಮೀಟರ ಓಟದಲ್ಲಿ ದ್ವಿÃತಿಯ ಸ್ಥಾನವನ್ನು ಮತ್ತು ಬಾಲಕಿಯರ (೪x೧೦೦) ರೀಲೆಯಲ್ಲಿ ದ್ವಿÃತಿಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರೆಲ್ಲರಿಗೂ “ನೀಡ್ಸ” ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಬಡಕುಂದ್ರಿ ಅವರು ಮತ್ತು ಆಡಳಿತಾಧಿಕಾರಿ ಶ್ರಿÃಮತಿ ಹೇಮಲತಾ ಬಡಕುಂದ್ರಿ. ಸಂಸ್ಥೆಯ ಪ್ರಾಚಾರ್ಯ ಅಮೀರ ಮುಲ್ತಾನಿ ಹಾಗೂ ಎಲ್ಲ ಉಪನ್ಯಾಸಕ ಬೋದಕ ಮತ್ತು ಭೋದಕೇತರ ಸಿಬ್ಬಂದಿ ವೃಂದ ಹಾಗೂ ಶ್ರಿÃಮತಿ ಅಕ್ಕುತಾಯಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ. ಶೈಕ್ಷಣಿಕ ಮತ್ತು ಕ್ರಿÃಡಾ ಜೀವನದಲ್ಲಿ ಇದೆ ರೀತಿ ಯಶಸ್ಸು ದೂರೆಯಲೆಂದು ಹಾರೃಸಿದ್ದಾರೆ.

loading...