ಬತ್ತಿದ ಭೀಮೆ, ಅಂತರ್ಜಲ ಕುಸಿತ : ನೀರಿಗಾಗಿ ಪರದಾಟ

0
4
loading...

ಧನ್ಯಕುಮಾರ ಧನಶೆಟ್ಟಿ
ಇಂಡಿ: ಉತ್ತರ ಕರ್ನಾಟಕದ ಜೀವನದಿಗಳಲ್ಲಿ ಭೀಮಾನದಿಯೊಂದು ಅದರಲ್ಲಿ ನೀರು ಬತ್ತಿ ಹೋಗಿದೆ. ಅಂತರ್ಜಲಮಟ್ಟ ಕೂಡ ಕಡಿಮೆಯಾಗಿದೆ. ಬಾವಿ-ಕೈಪಂಪುಗಳಲ್ಲಿ ನೀರು ಇಲ್ಲ. ಇದ್ದರೂ ತಾಸಿಗೊಂದು ಕೊಡ ತುಂಬುವಷ್ಟು ಮಾತ್ರ. ತಾಲೂಕಿನ ಮತ್ತು ಪಟ್ಟಣದ ಅಲ್ಲದೇ ಇದರಿಂದ ನದಿ ನೀರನ್ನೆÃ ಅವಲಂಬಿಸಿದವರು ಹನಿ ನೀರಿಗೂ ಪರದಾಡುವಂತಾಗಿದೆ.

ಇದು ಕರ್ನಾಟಕ ಮತ್ತು ಮಹಾರಾಷ್ಟç ಮಧ್ಯದಲ್ಲಿರುವ ಭೀಮಾನದಿಯು ಅದರ ಪಕ್ಕದಲ್ಲಿಯೇ ಸಿಕ್ಕು ಒದ್ದಾಡುತ್ತಿರುವ ಗಡಿ ರೇಖೆಯಲ್ಲಿ ಗುರುತಿಸಿಕೊಂಡಿರುವ ಇಂಡಿ ತಾಲೂಕಿನಲ್ಲಿ ಸುಮಾರು ೮೦ ಕ್ಕೂ ಹೆಚ್ಚು ಹಳ್ಳಿಗಳು ಇವೆ ಇವುಗಳು ಕುಡಿಯುವ ನೀರಿಗಾಗಿ ದಿನನಿತ್ಯ ಪರಿದಾಡುವಂತಾಗಿದೆ.
ಇಂಡಿ ಪಟ್ಟಣದಲ್ಲಿಯೂ ಕೂಡಾ ಹದಿನೈದು ದಿಗಳಿಗೊಮ್ಮೆ ಪುರಸಭೆಯು ನೀರು ಬಿಡುತ್ತಿದೆ.ಅದು ಕೂಡಾ ಒಂದೊಂದು ವಾರ್ಡುಗಳಿಗೆ ಬಿಟ್ಟರೆ ಕೆಲವೊಂದ ವಾರ್ಡುಗಳಿಗೆ ಮನಸ್ಸಿಗೊಮ್ಮೆ ನೀರು ಬಿಡುತ್ತಿದ್ದಾರೆ ಇದನ್ನು ಪುರಸಭೆಯ ಅಧಿಕಾರಿಗಳು ಹೆಚ್ಚಾಗಿ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಪಟ್ಟಣದ ನಾಗರಿಕರು ತೀವ್ರ ತೊಂದರೆಯಾಗುತ್ತಿದೆ ಎಂದು ನಾಗರಿಕರ ದೂರಾಗಿದೆ.

ಆದರೆ ಬೇಸಿಗೆಯ ಈ ದಿನಗಳು ಭೀಮಾನದಿಯು ಸಂಪೂರ್ಣವಾಗಿ ಬತ್ತಿ ಹೋಗಿದೆ.ಇದರಿಂದ ತಾಲೂಕಿನಲ್ಲಿ ಕುಡಿಯುವ ನೀರು ಕೊರತೆಯಾಗಿದೆ. ಇದರಿಂದ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಲಭ್ಯವಾಗದೆ ನೀರಿಗಾಗಿ ಹಾಹಾಕಾರ ಉಂಟಾಗುವ ಎಲ್ಲ ಲಕ್ಷಣಗಳು ಗೋಚಸುರಿತ್ತಿವೆ.
ಪಟ್ಟಣದಲ್ಲಿ ಹಲವಾರು ತಿಂಗಳು ಗತಿಸಿದರೂ ಪುರಸಭೆಯು ನೀರು ಅಗತ್ಯ ಪ್ರಮಾಣಕ್ಕಿಂತಲೂ ಕಡಿಮೆ ನೀರು ನಲ್ಲಿ ಮೂಲಕ ದೊರೆತರೆ ಮತ್ತೊಂದಡೆ ನದಿ ದಂಡೆಯ ಮೇಲಿನ ಹಳ್ಳಿಗಳ ಸ್ಥಿತಿಯಂತೂ ಸಂಪೂರ್ಣ ಹದೆಗೆಟ್ಟಿದೆ. ಹೀಗಾಗಿ ತಾಲೂಕಿನ ಎಲ್ಲಡೆ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ.

ಕೊರತೆಗೆ ಕಾರಣ: ಹೆಚ್ಚುತ್ತಿರುವ ಬಿಸಿಲಿನ ಬೇಗೆ, ಮಳೆ ಕೊರತೆ, ನೀರಾವರಿಗೆ ಬಳಸುವ ಅವೈಜ್ಞಾನಿಕ ಬೆಳೆ ಪದ್ದತಿ, ಹೆಚ್ಚು ನೀರು ಬಯಸುವ ಬಾಳೆ, ಕಬ್ಬು ಮತ್ತು ತೋಟದ ಬೆಳೆಗಳನ್ನು ಭೀಮಾ ನದಿ ದಂಡೆಗುಂಟ ಬೆಳೆಯುತ್ತಿರುವುದು ಹಾಗೂ ವಿವಿಧ ರೀತಿಯ ನೀರು ಬಳಸುವ ಅವೈಜ್ಞಾನಿಕ ಪದ್ದತಿ ಇತರರ ಕಾರಣಗಳಿಂದ ಭೀಮೆ ಬತ್ತಿ ಹೋಗಿ ಈ ಭಾಗದ ಜನ-ಜಾನುವಾರುಗಳಿಗೆ ಮಳೆಗಾಲದಲ್ಲಿಯೂ ಕುಡಿಯುವ ನೀರಿಲ್ಲದಂತೆ ಆಗಿದೆ.
ತಾತ್ಕಾಲಿಕ ಪರಿಹಾರ: ಮುಂದಿನ ಬೇಸಿಗೆಗೆ ಹೀಗಾಗದಿರಲಿ ಎಂಬ ಮುಂದಾಲೋಚನೆಯೊಂದಿಗೆ ಸರಕಾರ ಅಗತ್ಯ ಕ್ರಮ ಕೈಕೊಂಡು ನೀರು ಸಂಗ್ರಹ, ಬಿಡುಗಡೆ, ನಿಷೇಧಿತ ಬೆಳೆ ಬೆಳೆಯದಂತೆ ಕಟ್ಟು ಪಾಡು ಹಾಕುವುದು, ಇತರ ಕ್ರಮದಲ್ಲಿ ನೀರು ಪೋಲಾಗದಂತೆ ನೋಡಿಕೊಳ್ಳುವುದು ಇತರ ಕ್ರಮಗಳು ಕಟ್ಟು ನಿಟ್ಟಾಗಿ ಪಾಲಿಸಬೇಕು. ಅಂದಾಗ ಮಾತ್ರ ಬೇಸಿಗೆಯಲ್ಲಾದರೂ ತಾಲೂಕಿನಲ್ಲಿ ಹರಿದಿರುವುವ ಭೀಮೆಯು ನೀರು ತುಂಬಿಕೊಂಡು ಕಂಗೊಳಿಸುತ್ತ ಈ ಭಾಗದ ಜನರ ದಾಹವನ್ನು ಶಾಶ್ವತವಾಗಿ ತಣಿಸುವಂತಾಗಲಿ ಎಂಬುದು ಜನರ ಆಕಾಂಕ್ಷೆಯಾಗಿದೆ.

loading...