ಬಯಲು ಶೌಚ ಮುಕ್ತ ಗ್ರಾಮವಾಗಿಸಲು ಮುಂದಾಗಿ: ಪೃಥ್ವಿ ಹಿರೇಮಠ

0
7
loading...

ಬಸವನಬಾಗೇವಾಡಿ: ಗ್ರಾಮವನ್ನು ಬಯಲು ಶೌಚ ಮುಕ್ತ ಗ್ರಾಮವಾಗಿಸಲು ಗ್ರಾಮಸ್ಥರು ಮುಂದಾದಲ್ಲಿ ಉತ್ತಮ ಆರೋಗ್ಯದಿಂದ್ದರಿರಲು ಸಾಧ್ಯವೆಂದು ೫ನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಪೃಥ್ವಿ ಹಿರೇಮಠ ಹೇಳಿದರು. ತಾಲೂಕಿನ ಯರನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹತ್ತರಕಿಹಾಳ ಗ್ರಾಮದಲ್ಲಿ ಯರನಾಳ ಗ್ರಾಮ ಪಂಚಾಯ್ತಿ ಹಾಗೂ ಭಾರತೀಯ ಯುವಜನ ಸೇವಾ ಸಂಸ್ಥೆಯ ಸಹಯೋಗದಲ್ಲಿ ಮನೆ ಮನೆ ಶೌಚಾಲಯದ ಜಾಗೃತಿ ಅಭಿಯಾನದಲ್ಲಿ ಮನೆ ಮನೆ ತೆರಳಿ ಮಾತನಾಡಿದ ಬಾಲಕಿ ಪೃಥ್ವಿ ಹಿರೇಮಠ ಬಯಲು ಮಲ ವಿಸರ್ಜನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮಲೇರಿಯಾ, ಡೆಂಘೀ ಜ್ವರ, ಚಿಕ್ಕನ್ ಗೂನ್ಯದಂತಹ ಕಾಯಿಲೆಗಳು ಬರುತ್ತವೆ ಎಂದು ಹೇಳಿದರು.
ಬಯಲು ಶೌಚ ಮುಕ್ತ ಗ್ರಾಮವಾಗಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜನರು ಉತ್ತಮ ಆರೋಗ್ಯವಂತರಾಗಿರಲು ಶೌಚಾಲಯದ ಕುರಿತಾಗಿ ಹಲವಾರು ಕರ‍್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುತ್ತಿದ್ದು ಹಾಗೂ ವ್ಯಯಕ್ತಿ ಶೌಚಾಲಯ ಕಟ್ಟಿಸಿಕೊಳ್ಳಲು ಎಸ್.ಸಿ/ ಎಸ್.ಟಿ ವರ್ಗದವರಿಗೆ ೧೫ ಸಾವಿರ ರೂಗಳು, ಸಾಮಾನ್ಯ ವರ್ಗಕ್ಕೆ ೧೨ಸಾವಿರ ರೂ,ಗಳು ಸಹಾಯಧನ ನೀಡುತ್ತಿದ್ದು ಈ ಹಣದಿಂದ ತಮ್ಮ ತಮ್ಮ ಮನೆಗಳ ಮುಂದೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಉತ್ತಮ ಕಾಪಾಡಿಕೊಳ್ಳುವುದರ ಜೊತೆಗೆ ಸ್ವಚ್ಚ ಗ್ರಾಮ, ಸ್ವಾಸ್ಥಗ್ರಾಮವನ್ನಾಗಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಿಡಿಓ ಡಿ.ಎಂ. ಬಿಳಿಕುದುರೆ, ಗ್ರಾಪಂ ಸದಸ್ಯರಾದ ರವಿ ಉಣ್ಣಿÃಭಾವಿ, ಆನಂದ ಉಪ್ಪಾರ, ಪರಸಪ್ಪ ಎಂಟಮಾನ, ಮಾಜಿ ಗ್ರಾಪಂ ಸದಸ್ಯ ಸಿದ್ದು ಸಜ್ಜನ, ಭಾರತೀಯ ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ಶರಣು ಕಾಟಕರ, ಜಗದೀಶ ಮಠ, ಶಂಕ್ರೆಪ್ಪ ಹುಕೇರಿ, ಸಂಗಪ್ಪ ಮಾನಿಂಗಪ್ಪಗೋಳ, ಜಕ್ಕಪ್ಪ ಪಡಸಲಗಿ, ಶ್ರಿÃಮಂತ ಲಗಟಗೇರಿ ಸೇರಿದಂತೆ ಇತರರು ಇದ್ದರು.

loading...