ಬಲೆಗೆ ಬಿದ್ದ ಚಿನ್ನದ ಮೀನು

0
11
loading...

ಒಳ್ಳೆ ಜಾತಿ ಮೀನಿನ ಬೆಲೆ ಎಷ್ಟಿರಬಹುದು ಎಂದು ಪ್ರಶ್ನೆ ಕೇಳಿದ್ರೆ ಸಾವಿರದೊಳಗೊಂದು ಸಂಖ್ಯೆ ಹೇಳ್ತೇವೆ. ಆದ್ರೆ ಮಹಾರಾಷ್ಟ್ರದ ಪಾಲ್ಗರ್ ನಲ್ಲಿ ಮೀನೊಂದು ಆಶ್ಚರ್ಯಕರ ಬೆಲೆಗೆ ಮಾರಾಟವಾಗಿದೆ. ಒಂದು ಮೀನು 5.5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಪಾಲ್ಗರ್ ನ ಘೋಲ್ ಮೀನು ದಾಖಲೆ ಬೆಲೆಗೆ ಮಾರಾಟವಾಗಿದೆ. ಘೋಲ್ ಮೀನಿನ ಚರ್ಮ ಹಾಗೂ ಶ್ವಾಸಕೋಶವನ್ನು ಔಷಧಿಗೆ ಬಳಸಲಾಗುತ್ತದೆ. ಸೌಂದರ್ಯವರ್ದಕಕ್ಕೂ ಇದನ್ನು ಬಳಸಲಾಗುತ್ತದೆ. ಮಹೇಶ್ ಹಾಗೂ ಭರತ್ ಎಂಬುವವರು ಈ ಘೋಲ್ ಮೀನನ್ನು ಹಿಡಿದಿದ್ದರು.
ಈ ಮೀನಿನ ತೂಕ 30 ಕೆ.ಜಿಯಿತ್ತಂತೆ. ಘೋಲ್ ಮೀನಿನ ಎಲ್ಲ ಭಾಗವನ್ನೂ ಔಷಧಿಗಳಿಗೆ ಬಳಸಲಾಗುತ್ತದೆ. ಮೀನನ್ನು ಪಾಲ್ಗರ್ ಮೀನಿನ ಮಾರುಕಟ್ಟೆಗೆ ತಂದಿದ್ದ ಸಹೋದರರು ಆರಂಭದಲ್ಲಿಯೇ ಹೆಚ್ಚಿನ ಬೆಲೆಗೆ ಹರಾಜಿಟ್ಟಿದ್ದರು. ವಿಷ್ಯ ಇಡೀ ಪಾಲ್ಗರ್ ಗೆ ಗೊತ್ತಾಗಿದೆ. ಕೊನೆಯಲ್ಲಿ ಮೀನು 5.5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

loading...