ಬಸವಣ್ಣನವರ ನುಡಿಗಳನ್ನು ಲೋಕವೇ ಅನುಸರಿಸುತ್ತಿದೆ : ಕೈವಲ್ಯಾನಂದ ಶ್ರಿÃ

0
3
loading...

ಬಸವಣ್ಣನವರ ನುಡಿಗಳನ್ನು ಲೋಕವೇ ಅನುಸರಿಸುತ್ತಿದೆ : ಕೈವಲ್ಯಾನಂದ ಶ್ರಿÃ

ಕನ್ನಡಮ್ಮ ಸುದ್ದಿ- ಗೋಕಾಕ: ಬಸವಣ್ಣನವರು ವ್ಯಕ್ತಿತ್ವದ ಸೀಮೆ ಮೀರಿ ಬೆಳೆದಿದ್ದರಿಂದ ಅವರನ್ನು ವಿಶ್ವಗುರು ಎಂದು ಕರೆಯಲಾಯಿತು ಎಂದು ಹುಲ್ಲೊÃಳಿಹಟ್ಟಿ ಹಾಗೂ ಗದಗಿನ ಶಿವಾನಂದ ಮಠದ ಕೈವಲ್ಯಾನಂದ ಮಹಾಸ್ವಾಮಿಜಿ ಹೇಳಿದರು.
ಅವರು ಮಂಗಳವಾರದಂದು ನಗರದ ಬಸವಮಂದಿರದಲ್ಲಿ ಬಸವ ಮಂದಿರ ಸತ್ಸಂಗ ಸಮಿತಿ ಹಾಗೂ ಅಕ್ಕನಾಗಲಾಂಬಿಕಾ ಮಹಿಳಾ ಮಂಡಳ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬಸವ ಮಂದಿರದ ೧೧ನೇ ವಾರ್ಷೀಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರ ನಡೆ ನುಡಿಗಳನ್ನು ಲೋಕವೇ ಅನುಸರಿಸಿತು. ನಮ್ಮ ನಡೆ ನುಡಿಗಳು ಲೋಕ ಪಾವನವಾಗಿರಬೇಕು. ಅಂತಹ ಮಹಾತ್ಮರ ನುಡಿಗಳನ್ನು ಜನತೆಗೆ ತಲುಪಿಸುವಲ್ಲಿ ಇಲ್ಲಿಯ ಈ ಸತ್ಸಂಗ ಸಮಿತಿ ಹಾಗೂ ಮಹಿಳಾ ಮಂಡಳಗಳು ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ. ಇಂತಹ ಕಾರ್ಯಗಳಿಗೆ ಜನತೆ ಹೆಚ್ಚಿನ ಸಹಕಾರ ನೀಡಿ ತಾವು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಪುಣ್ಯವಂತರಾಗಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸತ್ಸಂಗ ಸಮಿತಿ ಅಧ್ಯಕ್ಷ ಬಿ.ಎಸ್.ಪಂಡಿತ, ಗಣ್ಯರಾದ ಎಸ್.ಎನ್ ಗುದಗನವರ, ಸೋಮಶೇಖರ ಮಗದುಮ್, ಮಹಾಂತೇಶ ತಾಂವಶಿ, ಜಯಾನಂದ ಮಾದರ ಸೇರಿದಂತೆ ಅನೇಕರು ಇದ್ದರು.

loading...