ಬಸ್‌ ನಿಲ್ದಾಣದ ಮುಂದೆ ಟಂ-ಟಂ ನಿಲುಗಡೆ: ನಾಗರಿಕರ ಆಕ್ರೋಶ

0
6
loading...

ಧನ್ಯಕುಮಾರ ಧನಶೆಟ್ಟಿ
ಇಂಡಿ: ಬಸ್‌ ನಿಲ್ದಾಣದ ಮುಂದಗಡೆ ಟಂ-ಟಂ-ಗಳ ಹಾವಳಿ ಹೆಚ್ಚಾಗಿದ್ದು. ಆದರೆ ಬಸ್‌ಗಳಿಗೆ ಹೋಗುವ ದಾರಿಯನ್ನು ಕೊಡದೆ ರಸ್ತೆಯ ಮಧ್ಯದಲ್ಲಿಯೇ ನಿಲ್ಲುತ್ತಾರೆ ಆದರೆ ಬಸ್‌ಗಳಿಗೆ ಹೋಗಲು ದಾರಿ ಬಿಡುವುದಿಲ್ಲ ಮತ್ತು ಪ್ರಯಾಣಿಕರಿಗೆ ಹೋಗಲು ಬಿಡುವುದಿಲ್ಲ ಇದರಿಂದ ಜನರಿಗೆ ತೀವ್ರ ತೊಂದರೆ ಯಾಗುತ್ತಿದೆ. ಆದರೆ ಬಸ್‌ ನಿಲ್ದಾಣದ ಮುಂದಗಡೆಯೇ ಪೊಲೀಸ್‌ ಪೇದೆಗಳು ನಿಲ್ಲುತ್ತಾರೆ ಆದರೆ ಅವರು ನಿಂತಿದ್ದ ಟಂ-ಟಂ ಗಳಿಗೆ ಕ್ಯಾರೇ ಎನ್ನುವುದಿಲ್ಲ. ಆದರೆ ಮಹಾರಾಷ್ಟ್ರ ಪಾಸೀಂಗ್‌ ಗಾಡಿಗಳಿಗೆ ಮಾತ್ರ ಕೈ ಮಾಡುವುವ ಮುಖಾಂತರ ತಮ್ಮ ಕೈ ಬೆಚ್ಚಗೆ ಮಾಡಿಕೊಳ್ಳುತ್ತಾರೆ ಹೊರತು ಯಾವುದೇ ಟ್ರಾಫಿಕ್‌ದ ಬಗ್ಗೆ ಚಿಂತೆಯೇ ಇಲ ಆದರೆ ಕೆಲವು ಪ್ರಮುಖ ರಸ್ತೆಗಳಲ್ಲಿ ಖಾಸಗಿ ವಾಹನಗಳು ಯಾವುದೇ ನಿರ್ಬಂಧವಿಲ್ಲದೆ ಎಲ್ಲಿಂದರಲ್ಲಿ ನಿಲ್ಲುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡೆತಡೆಯಾಗುತ್ತಿವೆ. ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನದಟ್ಟನೆಯ ಸ್ಥಳಗಳಾದ ಅಗರಖೇಡ ರಸ್ತೆ, ವಿಜಾಪುರ ರಸ್ತೆ, ಸಿಂದಗಿ ರಸ್ತೆ, ಮಹಾವೀರ ಸರ್ಕಲ್‌ನಲ್ಲಿ ಅಟೋರಿಕ್ಷಾ ಅಲ್ಲದೇ ಟೆಂಪೂಗಳು ಅವುಗಳಲ್ಲದೇ ಇನ್ನಿತರ ಖಾಸಗಿ ವಾಹನಗಳನ್ನು ನಿಲ್ಲಿಸುವುದರಿಂದ ಬಸ್‌ ಹಾಗೂ ಇನ್ನೀತರ ದೊಡ್ಡ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆಯಾ ಸ್ಥಳಗಳಲ್ಲಿ ನೋ ಪಾರ್ಕಿಂಗ್‌ ಎಂಬ ಫಲಕ ಹಾಕಲಾಗಿದ್ದರೂ ಅದನ್ನು ಲೆಕ್ಕಿಸದೆ ವಿವಿಧ ವಾಹನಗಳು ರಾಜಾರೋಷವಾಗಿ ನಿಲ್ಲಿಸಲಾಗುತ್ತಿವೆ.
ಇದರಿಂದ ಅಪಘಾತಗಳು ಸಂಭವಿಸುವ ಭೀತಿವುಂಟಾಗಿದ್ದು, ನಾಗರಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬಸ್‌ ನಿಲ್ದಾಣ ಸಮೀಪದ ವಿಜಾಪುರ ರಸ್ತೆ, ಸಿಂದಗಿ ರಸ್ತೆ, ಚಿಕ್ಕ ಮಣ್ಣೂರ ರಸ್ತೆಯಲ್ಲಿ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿರುವುದರಿಂದ ಕೂಡಲೇ ಪೊಲೀಸ್‌ ಇಲಾಖೆ ಈ ಕುರಿತು ಕ್ರಮ ಜರುಗಿಸಬೇಕೆಂದು ನಾಗರಿಕರ ಒತ್ತಾಯಿಸಿದ್ದಾರೆ. ಸಂಚಾರಿ ಅವ್ಯವಸ್ಥೆ ಕಂಡು ಕಾಣದಂತೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಕೂಡಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ನಾಗರಿಕರ ಒತ್ತಾಯವಾಗಿದೆ.

loading...