ಬಾಲಕ ಕಾಣೆ : ಪತ್ತೆಗೆ ಮನವಿ

0
7
loading...

ವಿಜಯಪುರ: ಮಕ್ಕಳ ಸಹಾಯವಾಣಿ ಇವರ ಮೂಲಕ ಟಕ್ಕೆಯಲ್ಲಿರುವ ಸರಕಾರಿ ಬಾಲಕರ ಬಾಲಕಮಂದಿರದಲ್ಲಿ ದಾಖಲಾದ ಸಲೀಮ ಉರ್ಫ ಸಾಗರ ಎಂಬ ೭ ವರ್ಷದ ಬಾಲಕ ಕಾಣೆಯಾಗಿದ್ದು, ಪತ್ತೆಗಾಗಿ ಸರಕಾರಿ ಬಾಲಕರ ಬಾಲ ಮಂದಿರದ ಅಧೀಕ್ಷಕರು ಮನವಿ ಮಾಡಿಕೊಂಡಿದ್ದಾರೆ. ಸದರಿ ಬಾಲಕ ದಿನಾಂಕ: ೧೨-೦೬-೨೦೧೮ ರಂದು ಮಕ್ಕಳ ಸಹಾಯವಾಣಿ (೧೦೯೮) ವಿಜಯಪುರ ಇವರ ಮುಖಾಂತರ ಸರಕಾರಿ ಬಾಲಕರ ಬಾಲಮಂದಿರ (ಕಿರಿಯ) ಟಕ್ಕೆ, ವಿಜಯಪುರ ಸಂಸ್ಥೆಯ ಸ್ವಾಗತ ಘಟಕದಲ್ಲಿ ದಾಖಲಾಗಿದ್ದ. ದಿನಾಂಕ: ೦೪-೦೮-೨೦೧೮ ರಂದು ಬೇಳಿಗ್ಗೆ ೬.೦೦ ಗಂಟೆಗೆ ಸಂಸ್ಥೆಯಿಂದ ಕಾಣೆಯಾಗಿದ್ದು ಸದರಿ ಬಾಲಕ ತನ್ನ ಹೆಸರನ್ನು ಸಲೀಮ ಅಥವಾ ಸಾಗರ ಎಂದು ಹೇಳುತ್ತಾನೆ. ಮೂಲತಃ ಬಾಲಕನು ಮಹಾರಾಷ್ಟç ರಾಜ್ಯದ ಲಾತೂರ ಪಟ್ಟಣದವನಾಗಿದ್ದು, ಯಾರಿಗಾದರೂ ಸದರಿ ಬಾಲಕನ ಸುಳಿವು ಸಿಕ್ಕಲ್ಲಿ ಈ ಕೆಳಗಿನ ವಿಳಾಸಕ್ಕೆ ತಿಳಿಸಲು ಅಥವಾ ತಂದು ಒಪ್ಪಿಸಲು ಕೋರಲಾಗಿದೆ. ಬಾಲಕನ ವಿವರ ಹಾಗೂ ಚಹರೆ : ಬಾಲಕನ ಹೆಸರು: ಸಲೀಮ ಉರ್ಫ ಸಾಗರ, ಪಾಲಕರು/ಪೋಷಕರು: ತಂದೆ: ಸೋಹೇಲ ಶೇಖ, ಬಾಲಕನ ವಯಸ್ಸು: ೭ ವರ್ಷ. ಬಾಲಕನ ಚಹರೆ: ತೆಳ್ಳನೆಯ ದೇಹವಿದ್ದು, ಗೋಧಿ ಬಣ್ಣ, ದುಂಡಾದ ಮುಖ, ಗುಂಗರು ಕೂದಲು ಹೊಂದಿದ್ದಾನೆ. ಬಾಲಕನ ಎತ್ತರ: ೪” (ಫೂಟು) ಬಾಲಕನ ಧರಿಸಿದ ಬಟ್ಟೆ: ಹಳದಿ ಬಣ್ಣದ ಕಾಲರ ಇಲ್ಲದ ಹರಿದ ಟಿ ಶರ್ಟ್ ಮತ್ತು ಲೈಟ್ ಕ್ರಿಮ್ ಹಾಪ್ಯಾಂಟ ದರಿಸಿದ್ದ. ಸದರಿ ಬಾಲಕನ ಪಾಲಕರ ವಿಳಾಸ ಪತ್ತೆ ಆದಲ್ಲಿ ಅಧೀಕ್ಷಕರು, ಸರಕಾರಿ ಬಾಲಕ ಬಾಲಮಂದಿರ (ಕಿರಿಯ) ಟಕ್ಕೆ, ವಿಜಯಪುರ. ೦೮೩೫೨-೨೭೦೦೯೪, ೯೯೮೬೭೭೨೬೭೭ ಸಂಖ್ಯೆಗೆ ಮಾಹಿತಿ ನೀಡಲು ಕೋರಿದೆ.

loading...