ಬೀದರ್‍ನಿಂದ ರಾಹುಲ್ ಸ್ಪರ್ಧೆ ಇಲ್ಲ

0
7
loading...

ಬೆಂಗಳೂರು:ರಾಹುಲ್ ಗಾಂಧಿ ಬೀದರ್‍ನಲ್ಲಿ ಸ್ಪರ್ಧಿಸುತ್ತಿಲ್ಲ ಅಂತಹ ಯಾವುದೇ ಚರ್ಚೆ ಪಕ್ಷದ ಮಟ್ಟದಲ್ಲಿ ನಡೆದಿಲ್ಲ ಎಂದು ಡಿಸಿಎಂ ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಬೀದರ್‍ನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರೆ ಎನ್ನುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್,ಅದು ಈಶ್ವರ್ ಖಂಡ್ರೆ ಅವರ ವೈಯಕ್ತಿಕ ಅಭಿಪ್ರಾಯವಷ್ಟೇ,ಆದರೆ ಸ್ಪರ್ಧೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದರು.
ಇನ್ನೂ ಜಾತಿ ಗಣತಿ ಸಮೀಕ್ಷಾ ವರದಿ ಬಿಡುಗಡೆ ವಿಚಾರ ಸಂಬಂಧ ಮಾತನಾಡಿದ ಡಿಸಿಎ, ಜಾತಿಗಣತಿ ವರದಿ ಇನ್ನೂ ಸರ್ಕಾರದ ಕೈಸೇರಿಲ್ಲ.ಮೊದಲು ಆಯೋಗ ಅಂತಿಮ ವರದಿ ಕೊಡಲಿ, ಆಮೇಲೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.

loading...