ಬೆಂಗಳೂರಿಗರ ಮೇಲೆ ಮತ್ತೆ ತೆರಿಗೆ ಹೊರೆ

0
16
loading...

ಬೆಂಗಳೂರು: ನಗರದ ಆಸ್ತಿ ಮಾಲೀಕರಿಗೆ ಬಿಬಿಎಂಪಿ ಮತ್ತೆ ಶಾಕ್ ಕೊಟ್ಟಿದೆ. ಬೆಂಗಳೂರಿಗರಿಗೆ ತೆರಿಗೆ ಹೊರೆ ಹೊರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಈ ಹಿಂದೆ ಪಾಲಿಕೆಯ ವಿರೋಧ ಪಕ್ಷ ತೀವ್ರವಾಗಿ ವಿರೋಧಿಸಿದ್ದ ಈ ವಿಚಾರವನ್ನು ಇಂದು ಮತ್ತೆ ಬಿಬಿಎಂಪಿ ಕೌನ್ಸಿಲ್ ಮುಂದೆ ಇಡಲಾಗಿದೆ.
ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿವೆ.ಇದರಿಂದ ರಸ್ತೆಗಳಲ್ಲಿ ಓಡಾಡುವ ಬಿಎಂಟಿಸಿ ಬಸ್‍ಗಳು ಆಗಾಗ ಹದಗೆ ಡುತ್ತಿವೆ ಹಾಗೂ ಇದರಿಂದ ಬಿಎಂಟಿಸಿಗೆ ಹೆಚ್ಚಿನ ನಿರ್ವಹಣೆ ಹೊರೆ ಬೀಳುತ್ತಿದೆ.ಬಿಬಿಎಂಪಿಯೇ ಬಿಎಂಟಿಸಿ ಇಲಾಖೆಗೆ ಹಣ ನೀಡಬೇಕೆಂದು ಕಳೆದ ಕೆಲದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
ಸಾರಿಗೆ ಸಚಿವ ಡಿಸಿ ತಮ್ಮಣ್ಣ ಪ್ರಸ್ತಾವನೆ ಪುರಸ್ಕರಿಸಿರುವ ರಾಜ್ಯ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ಸಾರ್ವಜನಿ ಕರಿಗೆ ಶೇಕಡಾ 2ರಷ್ಟು ಭೂ ಸಾರಿಗೆ ಉಪಕರ ವಿಧಿಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಉಸ್ತುವಾರಿ ಸಚಿವ ಡಾ. ಪರಮೇಶ್ವರ್ ಬಿಬಿಎಂಪಿಗೆ ತನ್ನ ಸಂಪನ್ಮೂಲ ಕ್ರೋಡೀಕರಿಸುವ ಹಕ್ಕಿದೆ. ಕಾನೂನು ಬಾಹಿರವಾಗಿದ್ರೆ ಮಾತ್ರ ಸರ್ಕಾರ ಮಧ್ಯಪ್ರವೇಶಿಸುತ್ತೆ ಎಂದರು.
ಇನ್ನು ಈ ಬಗ್ಗೆ ಸಾರ್ವಜನಿಕರು ಹಾಗೂ ಬಿಬಿಎಂಪಿ ವಿರೋಧ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.ಈಗಾಗಲೇ ಆಸ್ತಿ ಮಾಲೀಕರು ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದಾರೆ. ಮತ್ತೆ ತೆರಿಗೆ ಹೊರೆ ಹೊರೆಸುವುದು ಸರಿಯಲ್ಲ. ಅಲ್ಲದೆ ಎರಡು ವರ್ಷಗಳ ಹಿಂದಷ್ಟೆ ಆಸ್ತಿ ತೆರಿಗೆ ಶೇ. 20 ರಿಂದ 25 ಹೆಚ್ಚಿಸಿ ಆಸ್ತಿ ಮಾಲೀಕರಿಗೆ ಹೊರೆ ಹೊರಿಸಿತ್ತು.
ಈ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ,ಉಪಕರ ವಿಧಿಸುವ ಜವಾಬ್ದಾರಿ ಬಿಬಿಎಂಪಿ ಹೊತ್ತಿಲ್ಲ. ರಾಜ್ಯ ಹಾಗೂ ಕೇಂದ್ರಸರ್ಕಾರದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಬೇಕಿದೆ.ನರ್ಮ್ ಯೋಜನೆಯಡಿಯಲ್ಲಿ ಟ್ರಾನ್ಸ್ ಪೋರ್ಟ್ ಸೆಸ್ ವಿಧಿಸಬೇಕಂಬ ನಿಯಮವಿದೆ. ಅದರ ಪ್ರಕಾರ ಸೆಸ್ ವಿಧಿಸಲು ಅವಕಾಶವಿದೆ ಎಂದರು.
ಒಟ್ಟಿನಲ್ಲಿ ಉಪಕರ ವಿಧಿಸಿ ಮತ್ತೆ ತೆರಿಗೆದಾರರಿಗೆ ಹೊರೆ ಹೊರಿಸಲು ಪಾಲಿಕೆ ಮುಂದಾಗಿದ್ದು,ಈವಿಷಯವನ್ನು ಕೌನ್ಸಿಲ್ ಮುಂದೆ ಇಡಲಾಗಿದೆ. ಸಭೆಯಲ್ಲಿ ವಿಷಯ ಅನುಮೋದನೆಗೊಂಡರೆ ತೆರಿಗೆದಾರರ ಜೇಬಿಗೆ ಕತ್ತರಿ ಬೀಳೋದಂತೂ ಗ್ಯಾರಂಟಿ.
ಒಟ್ಟಿನಲ್ಲಿ ಕಳಪೆ ರಸ್ತೆ ಮಾಡುವ ಗುತ್ತಿಗೆದಾರರ ಬೇಜವಾಬ್ದಾರಿ, ಹಾಗೂ ಬಿಎಂಟಿಸಿ ವೆಚ್ಚಕ್ಕೂ ನೇರವಾಗಿ ಜನರೇ ತೆರಿಗೆ ವಾಪತಿಸಬೇಕಾದ ಅನಿವಾರ್ಯತೆ ಎದುರಾಗಿದೆ.

loading...