ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ `ಕೈ’?

0
11
loading...

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ರಾಜ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದೀಗ ಗೆಲುವಿಗೆ ಅಗತ್ಯವಿರುವ ಸಿದ್ಧತೆ ಆರಂಭಿಸಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವ ಹಿನ್ನೆಲೆ ಬೆಂಗಳೂರು ನಗರ ವ್ಯಾಪ್ತಿಯ
3 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಎರಡನ್ನು ಗೆಲ್ಲಲು ಸೂತ್ರ ಹೆಣೆಯುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಿಕೊಳ್ಳುತ್ತಿದೆ. ಜಾತಿ, ಜನಸಂಖ್ಯೆ, ಪಕ್ಷಗಳ ಬಲಾಬಲದ ಆಧಾರದ ಮೇಲೆ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಇಳಿಸುವ ಚಿಂತನೆ ನಡೆಸಿದೆ.
ಮಾಹಿತಿ ಪ್ರಕಾರ ಒಕ್ಕಲಿಗರು ಹೆಚ್ಚಿರುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡುವ ಚಿಂತನೆ ನಡೆದಿದೆ.ಉಳಿದಂತೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹೆಚ್ಚಿರುವ ಬೆಂಗಳೂರು ಕೇಂದ್ರ ಹಾಗೂ ಉತ್ತರ ಲೋಕಸಭೆ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.ಈ ನಿಟ್ಟಿನಲ್ಲಿ ಜೆಡಿಎಸ್ ಜತೆ ಸದ್ಯವೇ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ.
ಸದ್ಯ ಮೂರಕ್ಕೆ ಮೂರೂ ಕ್ಷೇತ್ರವನ್ನೂ ಬಿಜೆಪಿ ಗೆಲ್ಲುತ್ತಾ ಬರುತ್ತಿದೆ.ಇದೀಗ ಜೆಡಿಎಸ್ ಜತೆ ಒಂದಾಗಿ ಸ್ಪರ್ಧಿಸಿದರೆ ಮತಗಳು ವಿಭಜನೆ ಆಗುವುದಿಲ್ಲ. ಇದರಿಂದ ಮೂರರಲ್ಲಿ ಕನಿಷ್ಠ 2ನ್ನು ಗೆಲ್ಲಬಹುದು ಎನ್ನುವುದು ಲೆಕ್ಕಾಚಾರ ಕಾಂಗ್ರೆಸ್‍ನದ್ದಾಗಿದೆ.
ಸದ್ಯ ಇದಿನ್ನೂ ಪಕ್ಷದ ಆಂತರಿಕ ಚರ್ಚೆ ಹಂತದಲ್ಲಿದೆ.ಜೆಡಿಎಸ್ ಜತೆ ಮಾತುಕತೆ ನಡೆಯಬೇಕಿದೆ.ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8ರಲ್ಲಿ 5 ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಗೆದ್ದಿದೆ. ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲೂ ಕೈ ಬಲ ಹೆಚ್ಚಿದೆ.ಇವೆರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವಾಗಿದೆ.

loading...