ಬೆಂಬಲ ಬೆಲೆಯ ಹೆಸರು ಕೇಂದ್ರ ತೆರೆಯುವಂತೆ ಆಗ್ರಹಿಸಿ ಮನವಿ

0
7
loading...

ಬೆಂಬಲ ಬೆಲೆಯ ಹೆಸರು ಕೇಂದ್ರ ತೆರೆಯುವಂತೆ ಆಗ್ರಹಿಸಿ ಮನವಿ
ಕನ್ನಡಮ್ಮ ಸುದ್ದಿ-ಬೈಲಹೊಂಗಲ: ನಾಡಿನ ರೈತರ ಪರವಾಗಿ ಭಾರತೀಯ ಕೃಷಿಕ ಸಮಾಜ (ನವದೆಹಲಿ) ವತಿಯಿಂದ ಕನಿಷ್ಟ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿ ಪ್ರತಿಭಟನೆ ಮೂಲಕ ಉಪವಿಭಾಗಾಧಿಕರಿಗಳ ಕಛೇರಿಗೆ ಮುತ್ತಿಗೆ ಹಾಕಿ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿಯವರ ಮೂಲಕ ರೈತ ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮನವಿ ಸಲ್ಲಿಸಿ ಮಾತನಾಡಿ, ಕೇಂದ್ರ ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟುಮಾಡುವ ಮತ್ತು ಆರ್ಥಿಕವಾಗಿ ಸಶಕ್ತರನ್ನಾಗಿಸಲು ರೈತರ ಬೆಳೆದ ಫಸಲಿಗೆ ಕನಿಷ್ಠ ಬೆಂಬಲ ಬೆಲೆಯ ಘೋಷನೆ ಮಾಡಿದ್ದರು ಖರೀದಿ ಕೇಂದ್ರಗಳನ್ನು ತೆರೆಯದೆ ರಾಜ್ಯಸರ್ಕಾರ ರೈತರಿಗೆ ಅನ್ಯಾಯವೆಸಗುತ್ತಿದೆ ಎಂದರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ ಮತ್ತು ರಾಮದುರ್ಗ ತಾಲೂಕಿನಲ್ಲಿ ಪ್ರಮುಖವಾಗಿ ಬೆಳೆದ ಹೆಸರು ಬೆಳೆಗೆ ಕೇಂದ್ರ ಸರ್ಕಾರ ರೂ ೬೯೭೫/ ಪ್ರತಿ ಕ್ವಿಟಂಲ್‌ಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಈಗಾಗಲೆ ಫಸಲು ಬಂದಿದ್ದರು ಈ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆಯದೆ ಅಸಡ್ಡೆ ತೊರುತ್ತಿರುವದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಈ ಸಂದರ್ಭವನ್ನೆ ಬಳಸಿಕೊಂಡು ದಲ್ಲಾಳಿಗಳು ರೈತರ ಅಸಾಹಯಕತೆಯನ್ನು ಮನಗಂಡು ಕ್ವಿಂಟಲ್ ಹೆಸರಿಗೆ ರೂ ೪೦೦೦ ದಿಂದ ೪೫೦೦ ರೂಪಾಯಿಗಳಿಗೆ ಖರೀದಿಸಿ ದಾಸ್ತಾನು ಮಾಡುತ್ತಿದ್ದಾರೆ. ಇದರಿಂದ ರೈತನ ಪ್ರತಿ ಕ್ವಿಂಟಲ್‌ಕ್ಕೆ ರೂ ೨೪೦೦ ರಿಂದ ೩೦೦೦ಗಳ ವರೆಗೆ ನಷ್ಟ ಅನುಭವಿಸುತ್ತಿರುವದನ್ನು ಸರ್ಕಾರ ಜಾಣ ಕುರುಡುನಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು. ಭಾರತೀಯ ಕೃಷಿಕ ಸಮಾಜ ನವದೆಹಲಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಕಮತ ಮಾತನಾಡಿ, ರೈತರು ನಾಲ್ಕೆöÊದು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದು ಲಿವಾದೇವಿ ಗಾರರ ಹತ್ತಿರ ಸಾಲಮಾಡಿ ಬೆಳೆ ಬೆಳೆದಿದ್ದು ಇಂದು ಕೈಗೆ ಬಂದ ಹೆಸರು ಬೆಳೆಯನ್ನು ಕಡಿಮೆ ಬೆಲೆಯಲ್ಲಿ ದಲ್ಲಾಳಿಗಳಿಗೆ ಮಾರುವ ಸ್ಥಿತಿಬಂದಿದೆ. ಸಕಾರ ಕೆವಲ ಬೆಂಬಲ ಬೆಲೆ ನಿಗದಿಮಾಡಿದರೆ ಸಾಲದು. ಆ ದರದಲ್ಲಿ ರೈತರ ಬೆಳೆಗಳನ್ನು ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಖರೀದಿಸಿದ ನಂತರ ತಕ್ಷಣ ಹಣ ರೈತರಖಾತೆಗಳಿಗೆ ಸಂದಾಯವಾಗುವಂತೆ ನೋಡಿಕೊಂಡಾಗ ರೈತನ ದುಡಿಮೆಗೆ ಬೆಲೆ ಬರಲಿದೆ ಎಂದರು.
ಸರಕಾರ ದರ ನಿಗದಿಮಾಡಿ ರೈತರು ಎಲ್ಲ ಬೆಳೆಯನ್ನು ಮಾರಾಟಮಾಡಿದ ನಂತರ ಖರೀದಿ ಕೇಂದ್ರ ತೆರೆಯುವದು ಆ ಎಲ್ಲ ಲಾಭವನ್ನು ದಾಸ್ತಾನುಮಾಡಿದ ದಲ್ಲಾಳಿಗಳೆ ಪಡೆಯುವಂತಾಗುತ್ತಿದೆ. ಆದ್ದರಿಂದ ರೈತರ ಫಸಲು ಬಂದಾಗ ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರಗಳು ಪ್ರಾರಂಭವಾಗಿ ರೈತರ ಹಿತಾಸಕ್ತ ಕಾಪಾಡಬೇಕು. ಇದರಿಂದ ರೈತನ ಜೀವನ ಸದೃಡಗೊಳ್ಳಲಿದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರು ಬಿದಿಗಿಳಿದು ತಮ್ಮ ಹಕ್ಕಿಗಾಗಿ ಉಗ್ರ ಹೋರಾಟ ಮಾಡಬೇಕಾದಿತು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಾರುತಿ ತಿಗಡಿ ಸುರೇಶ ಹೊಳಿ, ಈರಪ್ಪ ಹುಬ್ಬಳ್ಳಿ, ಮಹಾದೇವ ಕಲಬಾಂವಿ, ಬಸವರಾಜ ದುಗ್ಗಾಣಿ, ಮುರಿಗೆಪ್ಪ ಗುಂಡ್ಲೂರ, ಮಡಿವಾಳ ತಳವಾರ, ಶ್ರಿÃಪತಿ ಪಠಾಣಿ, ಶಂಕರೆಪ್ಪ ಯಡಳ್ಳಿ, ಮಹೇಶ ಹರಕುಣಿ, ಸೋಮಲಿಂಗ ಮೆಳ್ಳಿಕೇರಿ ಮಡಿವಾಳಪ್ಪ ಹೋಟಿ. ಶಿವಾನಂದ ಶಿರಸಂಗಿ, ಬಾಳನಗೌಡ ಪಾಟೀಲ, ರಂಗಪ್ಪ ಬೂದಿಹಾಳ, ಶಿವಾನಂದ ಕಲ್ಲೂರ, ಮುನ್ನಿರ ಶೇಖ, ಮಡಿವಾಳ ಬುರಳಿ, ಬಸವರಾಜ ಬಾಳಿಕಾಯಿ, ಸೋಮಪ್ಪ ಬುಳ್ಳಿ, ಸೋಮಯ್ಯ ಏನಗಿಮಠ, ಮಡಿವಾಳಪ್ಪ ಚಿಕೊಪ್ಪ ಹಾಗೂ ನೂರಾರು ರೈತರು ಉಪಸ್ಥಿತರಿದ್ದರು.
——– ಬಾಕ್ಸ್—————-
ಸರ್ಕಾರ ಮತ್ತು ಕಂಪನಿಗಳು ನಿಗದಿಮಾಡುವ ದರಗಳಿಗೆ ರೈತರು ಪ್ರತಿಯೊಂದು ವಸ್ತುವನ್ನು ಖರೀದಿಸುವಾಗ ರೈತನ ಉತ್ಪನ್ನುಗಳಿಗೆ ಸಕಾರವೆ ದರ ನಿಗದಿ ಮಾಡಿದ್ದರು ಆದರ ನೀಡದಿರುವದು ರೈತರ ಜೀವನದ ಜೋತೆ ಆಟವಾಡುವಂತಾಗುತ್ತಿದೆ. ಇದನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು.
ಸೋಮಲಿಂಗ ಮೆಳ್ಳಿಕೇರಿ ಯುವರೈತ ಮುಖಂಡ
——– ಬಾಕ್ಸ್—————-
ಸರ್ಕಾರವೆ ನಿಗದಿಮಾಡಿದ ದರ ನಿಯಮಕ್ಕೆ, ದಲ್ಲಾಳಿಗಳು ಕವಡೆಕಾಸಿನ ಕಿಮ್ಮತ್ತುಕೊಡದಿರುವದನ್ನು ನೋಡಿದರೆ ಸರ್ಕಾರ ವ್ಯಾಪಾರಸ್ಥರ ಕೈಗೊಂಬೆಯಾಗಿದ್ದು ರೈತರ ಸುಲಿಗೆಮಾಡುಲು ಸಕಾರ ಪರೋಕ್ಷವಾಗಿ ಬೆಂಬಲನೀಡಿದಂತಾಗಿದೆ. ತಕ್ಷಣ ತಾನೆ ನಿರ್ಧರಿಸಿದ ದರದಲ್ಲಿ ಸರ್ಕಾರ ಹೆಸರು ಖರೀದಿ ಕೇಂದ್ರ ತೆರೆಯಬೇಕು.
ಮಾರುತಿ ತಿಗಡಿ ಹಿರಿಯ ರೈತ ಮುಖಂಡ ರೈತರ ಸಮಸ್ಯೆ ನನಗೂ ಅರ್ಥವಾಗಿದ್ದು ನಾನುಸಹಿತ ರೈತನಾಗಿದ್ದೆನೆ. ಹೆಸರು ಖರೀದಿ ಕೇಂದ್ರ ತೆರೆಯಲು ಸೂಕ್ತ ಕ್ರಮಕೈಗೊಳ್ಳಲು ತಕ್ಷಣ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮಕೈಗೊಳ್ಳುತ್ತೆನೆ. ರೈತರು ಆತಂಕಕ್ಕೆ ಒಳಗಾಗದೆ ಸರ್ಕಾರ ನಿಗದಿಮಾಡಿದ ದರದಲ್ಲಿ ಖರೀದಿಸಲು ಸರ್ಕಾರಕ್ಕು ವರದಿನೀಡಲಾಗುವದು.
ಶಿವಾನಂದ ಭಜಂತ್ರಿ
ಉಪವಿಭಾಗಧಿಕಾರಿಗಳು ಬೈಲಹೊಂಗಲ

loading...