ಬೆಳಗಾವಿಯಲ್ಲೂ ಮೂಳೆ ಕ್ಯಾನ್ಸರ್ ಗೆ ಚಿಕಿತ್ಸೆ: ಡಾ. ರವಿ

0
20
loading...

ಕನ್ನಡಮ್ಮ ಸುದ್ದಿ- ಬೆಳಗಾವಿ:ವಿಜಯ ಅರ್ಥೊ ಯ್ಯಾಂಡ್ ಟುರ್ಮೋ ಸೆಂಟರ್ ನಲ್ಲಿ ಮೂಳೆ ಕ್ಯಾನ್ಸರ ರೋಗ ತಜ್ಞ ವೈದ್ಯರಿಂದ ಚಿಕಿತ್ಸೆ ಸಿಗಲಿದೆ ಎಂದು ಡಾ.ರವಿ ಪಾಟೀಲ ಹೇಳಿದರು.

ಅವರು ನಗರದ ಸುದ್ಧಿಗೊಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಹಾಗೂ ಮುಂಬೈ ಮಹಾನಗರಗಳಿಗಿಂತ ಕಡಿಮೆ ಬೆಲೆಯಲ್ಲಿ ಈ ಚಿಕಿತ್ಸೆ ಇದೀಗ ಬೆಳಗಾವಿ ನಗರದಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಮೂಳೆ ಕ್ಯಾನ್ಸರ ರೋಗ ಬಿ.ಎಸ್.ತಜ್ಞ ಶ್ರೀಮಂತ ಮಾತನಾಡಿ, ಮೊಣಕಾಲು, ಮೊಣ ಕೈ ಗಳಿಗೆ ಎರಡು-ಮೂರು ವಾರಕ್ಕಿಂತ ಹೆಚ್ಚಿಗೆ ಕಾಲ ಗಂಟು ಅಥವಾ ವಿಪರೀತ ನೋವು ಇದ್ದಲ್ಲಿ ಅಂತವರು ವೈದ್ಯರನ್ನು ಒಮ್ಮೆ ಭೇಟಿ ಮಾಡಿ ಸಲಹೆ ಪಡೆಯುವಂತೆ ತಿಳಿಸಿದರು.

ಪ್ರತಿ ತಿಂಗಳ ಮೂರನೇ ರವಿವಾರ ಮುಂಜಾನೆ 9 ರಿಂದ ಸಂಜೆ 6 ರವರೆಗೆ votc ನಲ್ಲಿ ಈ ಮೂಳೆ ಕ್ಯಾನ್ಸರ್ ಕಾಯಿಲೆಗೆ ಸಂಬಂದಿಸಿದ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಬಸವರಾಜ ರೊಟ್ಟಿ ಸೇರಿದಂತೆ ‌ಇತರರು ಹಾಜರಿದ್ದರು.

loading...