ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡರಿಗೆ ವಾಕಿಂಗ್ ಮಾಡಿಸಿದ ಬಿಎಸ್‍ವೈ..!

0
6
loading...

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಭಾರಿ ಹಿನ್ನಡೆ ಕಂಡಿದ್ದ ಬಿಜೆಪಿ ಮುಖಂಡರನ್ನು ಸಕ್ರಿಯಗೊಳಿಸಲು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡರಿಂದ ವಾಕಿಂಗ್ ಮಾಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಡರಾತ್ರಿಯಿಂದ ಹಬ್ಸಕೋಟ ಪ್ರವಾಸಿಮಂದಿರದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಬೆಳಗ್ಗೆ ಸ್ಪೋಟ್ಸ್ ಶೂ ಧರಿಸಿ ವಾಕಿಂಗ್ ಮಾಡಿದರು. ಇವರ ಜೊತೆ ಸಂಸದ ಭಗವಂತ ಖೂಬಾ,ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬಾಲುವಾಲಿ, ಡಿ.ಕೆ ಸಿದ್ರಾಮ್, ಬಾಬುರಾವ್ ಕಾರಭಾರಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರಿಗೂ ವಾಕ್ ಮಾಡಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟು ಆರು ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಕಂಡಿದ್ದ ಬಿಜೆಪಿ ಸೋಲಿನ ಆತ್ಮಾವಲೋಕನ ಕೂಡ ಮಾಡಿಕೊಂಡಿರಲಿಲ್ಲ. ಹೀಗಾಗಿ ಪಕ್ಷಕ್ಕೆ ಹೊಸ ಹುರುಪು ತುಂಬುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ಲೋಕಸಭೆ ಚುನಾವಣೆಗೆ ಸಿದ್ಧಗೊಳಿಸಲು ಮುಖಂಡರಿಗೆ ವಾಕಿಂಗ್ ಮಾಡುವಾಗಲೇ ಬಿಎಸ್‍ವೈ ಪಕ್ಷ ಸಂಘಟನೆಯ ಟಾನಿಕ್ ಕೊಟ್ಟಿದ್ದಾರೆ.
ಇದೇ ವೇಳೆ ಬೀದರ್‍ನ ಹಬ್ಸಿಕೋಟೆಯಲ್ಲಿ ಮಾತನಾಡಿದ ಅವರು,ರಾಹುಲ್ ಗಾಂಧಿ ಬೀದರ್‍ಗೆ ಬಂದಾಗ ಇಲ್ಲಿನ ಹಗರಣದ ಬಗ್ಗೆ ಗಮನ ಕೊಡಲಿ, ಬ್ರೀಮ್ಸ್ ಹಗರಣ ಸೇರಿದಂತೆ ಅನೇಕ ಸಂಗತಿಗಳಿವೆ. ಅದಕ್ಕೆ ಗಮನ ಕೊಟ್ಟು ಕಿವಿ ಹಿಂಡಿ ಬುದ್ದಿ ಹೇಳಿದರೆ ಬಂದು ಹೋಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಾಲ ಮನ್ನಾ ಎಲ್ಲಿ ಆಗಿದೆ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ತಗೆದುಕೊಂಡಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ರಿಸರ್ವ್ ಬ್ಯಾಂಕ್ ಇಂಡಿಯಾ ಇನ್ನೂ ಬೆಂಗಳೂರಲ್ಲೇ ಇದೆ. ರೈತರ ಕೋ ಅಪರೇಟಿವ್ ಲೋನ್ ಮನ್ನಾ ಮಾಡಬಹುದು, ಈ ಬಗ್ಗೆ ಸಹ ಇನ್ನೂ ಸರ್ಕಾರ ಸ್ಪಷ್ಟಪಡಿಸಿಲ್ಲ ಹೀಗಾಇ ಮತ್ತೆ ಸಾಲ ಮನ್ನಾ ಬೇಡುವ ದುಸ್ಥಿತಿಗೆ ಬಂದು ತಲುಪಿದೆ ಎಂದರು.

loading...