ಬೊಮ್ಮನಜೋಗಿ ಕೆರೆ ತುಂಬಲು ರೈತರ ಒತ್ತಾಯ

0
4
loading...

ಆಲಮಟ್ಟಿ: ಸಿಂದಗಿ ತಾಲ್ಲೂಕಿನ ಬೊಮ್ಮನಜೋಗಿ ಕೆರೆಯನ್ನು ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ತುಂಬಿಸುವಂತೆ ಆಗ್ರಹಿಸಿ ಆ ಗ್ರಾಮದ ಗ್ರಾಮಸ್ಥರ ಜೊತೆ ಅಖಂಡ ಕರ್ನಾಟಕ ರೈತ ಸಂಘ ಕೆಬಿಜೆಎನ್‌ಎಲ್ ಕಚೇರಿ ಎದುರು ಪ್ರತಿಭಟಿಸಿತು.
ಶುಕ್ರವಾರ ಇಲ್ಲಿಯ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಬೊಮ್ಮನಜೋಗಿ ಕೆರೆ ಭರ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ನೀರಾವರಿಯಿಂದ ವಂಚಿತಗೊಂಡಿರುಗ ಬೊಮ್ಮನಜೋಗಿ ಗ್ರಾಮಕ್ಕೆ ಈ ಕೆರೆ ರೈತರಿಗೆ ಆಶ್ರಯ ತಾಣ, ಈ ಕೆರೆ ಈ ವರ್ಷ ಮಳೆಯಿಂದ ಭರ್ತಿಯಾಗಿಲ್ಲ, ಈ ಕೆರೆಯಿಂದ ಬೊಮ್ಮನಜೋಗಿ, ಇಬ್ರಾಹಿಂಪುರ, ಕೊಕಟನೂರ, ಕನ್ನೊಳ್ಳಿ, ಬೊಮ್ಮನಜೋಗಿ ತಾಂಡಾ-೧ ಮತ್ತು ತಾಂಡಾ ೨ ಗ್ರಾಮಗಳ ಕುಡಿಯುವ ನೀರಿನ ಮೂಲವಾಗಿದೆ. ಚಿಮ್ಮಲಗಿ ಏತ ನೀರಾವರಿಯ ಮುಖ್ಯ ಕಾಲುವೆ ಸಮೀಪವಿದೆ. ಅಲ್ಲಿಂದ ಒಂದು ಲ್ಯಾಟರಲ್ ಮೂಲಕ ದಾರಿ ಮಾಡಿಕೊಟ್ಟು, ಈ ಕೆರೆಯನ್ನು ಭರ್ತಿ ಮಾಡಬೇಕು ಎಂದು ಹಲವಾರು ಬಾರಿ ಮನವಿ ಮಾಡಿದ್ದೆÃವೆ, ಆದರೆ ಇನ್ನೂವರೆಗೂ ಕೆರೆ ಭರ್ತಿ ಮಾಡುವ ಕೆಲಸ ನಡೆದಿಲ್ಲ ಎಂದು ಆರೋಪಿಸಿದರು. ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್. ಪಾಟೀಲ ಮನವಿ ಸ್ವಿÃಕರಿಸಿ, ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಿದ್ರಾಮಪ್ಪ ರಂಜಣಗಿ, ಸದಾಶಿವ ಬರಟಗಿ, ಡಾ ರಾಮಚಂದ್ರ ಬಮ್ಮನಜೋಗಿ, ಸಿದ್ರಾಮ ಅಂಗಡಗೇರಿ, ವಿಠ್ಠಲ ಅಮತೆಗೌಡರ ಇತರರು ಇದ್ದರು.

loading...