ಬ್ರಿಮ್ಸ್ ಆಸ್ಪತ್ರೆ ಭ್ರಷ್ಟಾಚಾರ;ಬಿಎಸ್‍ವೈ ತರಾಟೆ

0
10
loading...

ಬೆಂಗಳೂರು:ಸಾಲು ಸಾಲು ಭ್ರಷ್ಟಾಚಾರದ ಆರೋಪ ಹೊತ್ತಿರುವ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಬ್ರಿಮ್ಸ್ ಮೆಡಿಕಲ್‍ಕಾಲೇಜಿನ ನಿರ್ದೇಶಕ ಸೇರಿದಂತೆ 10ಜನರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಎಫ್‍ಐಆರ್ ದಾಖಲಾಗಿದೆ. ಪೀಠೋಪಕರಣ,ಔಷಧಿ ಖರೀದಿ ಹಾಗೂ ಡಿ ಗ್ರೂಪ್ ನೌಕರರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮೇಲ್ನೋಟಕ್ಕೆ ಸಾಬೀತಾದರೂ ಇದನ್ನು ಸಹಿಸಿಕೊಂಡು ಅಂಥವರ ಬೆನ್ನಿಗೆ ನಿಂತಿದೆ ಈ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಕೋಟಿಗಟ್ಟಲೆ ಖರ್ಚು ಮಾಡಿ ಜಿಲ್ಲಾಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದರೂ ವೈದ್ಯರ ಅಸಡ್ಡೆತನ ಹಾಗೂ ಸೇವೆಗಳ ಅನಾನುಕೂಲತೆ ಇಲ್ಲಿನ ದುರಾವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇಲ್ಲಿನ ಭ್ರಷ್ಟಾಚಾರ ಬಯಲಾದರೂ ಸರ್ಕಾರ ಸುಮ್ಮನಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

loading...