ಭಾರತ ಸ್ಕೌಟ್ ಮತ್ತು ಗೈಡ್ಸ್ ಖಾಸಗಿ ವಿಶ್ವವಿದ್ಯಾಲಯ ಆರಂಭಕ್ಕೆ ಪ್ರಸ್ತಾವನೆ: ಸಿಂಧ್ಯಾ

0
19
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಭಾರತ ಸ್ಕೌಟ್ ಮತ್ತು ಗೈಡ್ಸ್ ಖಾಸಗಿ ವಿಶ್ವವಿದ್ಯಾಲಯ ಆರಂಭಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಕಾರಾತ್ಮಕ ಸ್ಪಂದನೆ ತೋರಿದ್ದಾರೆಂದು ಭಾರತ ಸ್ಕೌಡ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ವಿವಿ ಸ್ಥಾಪಿಸುವ ವಿಚಾರದಲ್ಲಿ ಸಿಎಂ ನಾಲ್ವರು ಕುಲಪತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕ ವಿವಿ ಆರಂಭಿಸುವುದರಿಂದ ಸ್ಕೌಟ್ ಮತ್ತು ಗೈಡ್ಸ್ ಪರಿಣಾಮಕಾರಿಯಾಗಿ ಬೆಳೆಸಬಹುದಾಗಿದೆ. ಕಾಲೇಜು ಹಂತದಲ್ಲಿನ ರೋವರ್ ಮತ್ತು ರೇಂಜರ್ ಪ್ರಭಾವಶಾಲಿಯಾಗಿ ಬೆಳೆಸಬಹುದಾಗಿದ್ದು, ಕೌಶಾಲ್ಯಭಿವೃದ್ಧಿ ತರಬೇತಿಗೆ ಅನುಕೂಲವಾಗಿದೆ ಎಂದರು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ಕೇಂದ್ರ ಆರಂಭಿಸಿ ವಿದ್ಯಾರ್ಥಿಗಳಿಗೆ-ಶಿಕ್ಷಕರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದ್ದು, ರಾಜ್ಯ ಸರಕಾರದಿಂದ ವಿವಿಧ ಚಟುವಟಿಕೆ ಹಾಗೂ ಮೂಲ ಸೌಲಭ್ಯಕ್ಕಾಗಿ 16 ಕೋಟಿ ರೂ. ಅನುದಾನ ದೋರೆತಿದೆ. ಅನುದಾನ ಹೆಚ್ಚಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದೇವೆ. ಉನ್ನತ ಶಿಕ್ಷಣದಲ್ಲಿ ಸ್ಕೌಟ್ ಹಾಗೂ ಗೈಡ್ಸ್ ಪೂರೈಸಿದ ವಿದ್ಯಾರ್ಥಿಗಳಿಗೆ ಇರುವ ಮೀಸಲಾತಿ ಹೆಚ್ಚಿಸುವಂತೆ ಮನವಿ ಮಾಡಿದ್ದೇವೆ. ಇಂಜಿನಿಯರಿಂಗ್ ಪದವಿಯಲ್ಲಿ ವಿಭಾಗವಾರು ಮೀಸಲಾತಿ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

loading...