ಭೀಮಾ ನದಿಗೆ ಮತ್ತೆ ಬರುತ್ತದೆ 16ಸಾವಿರ ಕ್ಯೂಸೇಕ್ಸ ನೀರು: ತಾರಾಪೂರ ಅಪಾಯದಲ್ಲಿ

0
23
loading...

ಆಲಮೇಲ: ಮಳೆಯೂ ಇಲ್ಲ ಇತ್ತ ಹೋಳೆಯೂ ಇಲ್ಲ ಆದರೂ ಪ್ರತಿವರ್ಷ ಜಲಾವೃತವಾಗುತ್ತಿರುವ ಸಿಂದಗಿ ತಾಲೂಕಿನ ತಾರಾಪುರ ಗ್ರಾಮ ಈಗ ಮತ್ತೆ ಸುಮಾರು 5ದಿನಗಳಿಂದ ಸಂಪೂರ್ಣವಾಗಿ ಜಲಾವೃತ್ತವಾಗಿ ಹೋರ ಸಂಪರ್ಕ ಕಳೆದುಕೋಮಡಿದೆ. ಗಾಯದ ಮೇಲೆ ಮತ್ತೆ ಬರೆ ಎಂಬ ಹಾಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮತ್ತೆ ಸೋಮುವಾರ 16 ಸಾವಿರ ಕ್ಯೂಸೇಕ್ಸ ನೀರು ಭೀಮಾನದಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲೆ ಜಲಾವೃತವಾಗಿ ಹೋರ ಜಗತ್ತು ಕಳೆದುಕೊಂಡು ಆತಂಕದಲ್ಲಿದ್ದ ತಾರಾಪೂರ ಜನರಿಗೆ ಈಗ ಮತ್ತೆ ನೀರು ಹೆಚ್ಚಿನ ಪ್ರಮಾಣದಲ್ಲಿ ಆವರಿಸುವ ಸಾಧ್ಯತೆ ಇದೆ ಎಂದು ಭೀಮಾ ಏತನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.
ದೂರವಾಣಿ ಮೂಲಕ ಮಾತನಾಡಿದ ಭೀಮಾ ಏತ ನೀರಾವರಿ ಅಧಿಕಾರಿಗಳು ಪ್ರತಿ ದಿನ ಸುಮಾರು 14 ರಿಂದ 15 ಸಾವಿರ ಕ್ಯೂಸೇಕ್ಸ ನೀರು ಭೀಮಾನದಿಗೆ ಹರಿದು ಬರುತ್ತಿದ್ದು ಈಗ ಸೋನ್ನ ಬ್ರೀಜ್‌ ಒಳಹರಿಯು 3.16 ಟಿ ಎಮ್‌ ಸಿ ಇದ್ದು ಇದು ಸೋನ್ನ ಬೀಜನ ಒಳ ಸಂಗ್ರಹ ಮಿತಿಯಾಗಿದು, ಈಗ ಬರುವ ನೀರು ಅಫಜಲ್‌ಪೂರ ತಾಲೂಕಿಗೆ ಪ್ರತಿ ದಿನ ಸುಮಾರು 6 ಗೇಟುಗಳ ಮೂಲಕ 12 ಸಾವಿರ ಕ್ಯೂಸೇಕ್ಸ ನೀರು ಬಿಡಗಾಗುತ್ತಿದ್ದು, ಇಷ್ಟೆ ನೀರು ತಡೆದರೂ ತಾರಾಪುರ ಸಂಪರ್ಕ ಕಳೆದುಕೊಳ್ಳುತ್ತದೆ, ಇಂದು ಬರುವ ಹೆಚ್ಚಿನ ನೀರು ತಾರಾಪುರಕ್ಕೆ ಬಂದು ತಲುಪಿದ್ದರೆ ತಾರಾಪುರ ಗ್ರಾಮ ಇನಷ್ಟು ಅಫಾಯದಲ್ಲಿ ಇರುತ್ತದೆ ಮತ್ತೆ ಮೂರು ನಾಲ್ಕು ದಿನಗಳ ನಂತರ ಮತ್ತೆ ನೀರಿನ ಮಟ್ಟ ಕಡಿಮೆ ಆಗುತ್ತದೆ ಎಂದು ಭೀಮಾ ಏತ ನೀರಾವರಿ ಅಧಿಕಾಗಳು ತಿಳಿಸಿದ್ದಾರೆ.

ಈಗಾಗಲೇ ತಾರಾಪುರ ಗ್ರಾಮ ಸಂಪೂರ್ಣವಾಗಿ ದೀಪದಂತೆ ಆಗಿದ್ದು ಗ್ರಾಮದ ಸುತ್ತಲು ನೀರು ಆವರಿಸಿದೆ ನಿಂತ ನೀರಿನಿಂದ ಜಲಪರ ಪ್ರಾಣಿಗಳು ಗ್ರಾಮದಲ್ಲಿ ಬರುತ್ತಿವೆ ಎಂಬ ಬಯದಲ್ಲಿ ರಾತ್ರಿವಿಡಿ ನಿದ್ದೆ ಮಾಡದೆ ಇರುವ ಗ್ರಾಮಸ್ಥರಿಗೆ ಮತ್ತೆ ಇಂದು ಬರುವ ನೀರು ಮತ್ತಷ್ಟು ನಿದ್ದೆ ಕೆಡೆಸುತ್ತದೆ ಎಂದು ಗ್ರಾಮಸ್ಥರು ಮಾತಾಡಿತ್ತಿದ್ದಾರೆ.

loading...