ಭೂಮಿಯಲ್ಲಿ ದುಡಿಯುವ ಒಕ್ಕಲಿಗ ಬಡವನಲ್ಲ

0
7
loading...

ಸಾವಳಗಿ: ಭೂಮಿಯಲ್ಲಿ ಶ್ರಮವಹಿಸಿ ದುಡಿಯುವ ಒಕ್ಕಲಿಗ ಎಂದು ಬಡವನಲ್ಲ, ಭೂಮಿಯೊಂದಿದ್ದರೆ ಬಂಗಾರ ಜೋಪಾನ ಮಾಡಿದಂತೆ ನಿನ್ನನ್ನು ಮಾಡುತ್ತದೆ, ಭೂಮಿ ಮಾರಿ ಜೀವನ ಸಾಗಿಸುತ್ತೆÃನೆ ಎಂದರೆ ಅದು ಕ್ಷಣಿಕ ಶ್ರಿÃಮಂತ ಮಾತ್ರ ಎಂದು ವಿಜಯಪೂರ ಜ್ಞಾನಯೋಗಾಶ್ರಮ ಪ.ಪೂ. ಸಿದ್ದೆÃಶ್ವರ ಮಹಾಸ್ವಾಮಿಗಳು ಹೇಳಿದರು.
ಸಾವಳಗಿ ಸಮೀಪದ ಚಿಕ್ಕಲಕಿಕ್ರಾಸ ಶಿವಾನಂದ ಮಹಾಸ್ವಾಮಿಗಳ ಸಾಧನ ಸಮನ್ವಯ ತಪೋವನ ಭಗೀರಥಪೀಠ ಇವರ ಸಹಯೋಗದಲ್ಲಿ “ಸತ್ಸಂಗ ಹಾಗೂ ಮಹಾದ್ವಾರದ ಉದ್ಘಾಟನೆ” ಸಮಾರಂಭದಲ್ಲಿ ಮಾತನಾಡಿದರು. ಜನರಿಗೆ ಆ ಸಮೃದ್ದ ಹಾಗೂ ಸಂತಸದ ಜೀವನದ ದಾರಿಯೇ ತಿಳಿದಿರುವುದಿಲ್ಲ, ರೈತರಲ್ಲದವರಿಗೆ ಚಿನ್ನದಂತಾ ಭೂಮಿಯಲ್ಲಿ ಬರಿ ಮಣ್ಣೆ ಕಾಣುತ್ತದೆ, ಅನುಭವಿಕ ರೈತನಿಗೆ ಮಣ್ಣು ಮಣ್ಣಲ್ಲ ಚಿನ್ನ..! ಅನ್ನಬ್ರಹ್ಮನಿಗೆ ಜನ್ಮ ಕೊಡುವ ಅನ್ನಪೂರ್ಣೇಶ್ವರಿ ಭೂಮಾತೆ.! ಸೂರ್ಯ, ಚಂದ್ರ, ಭೂಮಿ ಹಾಗೂ ಪ್ರಾಣಿ-ಪಕ್ಷಿಗಳು, ನಿಸರ್ಗ ಒಂದು ಕ್ಷಣವೂ ಸಮಯ ವ್ಯರ್ಥ ಮಾಡದೆ ಕೆಲಸ ಮಾಡುತ್ತಿರುತ್ತವೆ, ಅವುಗಳಂತೆ ಫಲಾಪೇಕ್ಷೆ ಬಯಸದೆ ಮನುಷ್ಯರಾದ ಮೇಲೆ ನಿರಂತರ ಕೆಲಸ ಮಾಡುತ್ತಿದ್ದರೆ ಸಾಧನೆ ತಾನಾಗಿಯೇ ಒಲಿಯುತ್ತದೆ. ಕೈ-ಕಾಲುಗಳಿರುವುದು ಕೆಲಸಕ್ಕಾಗಿ ವಿನ: ನೋಡುವುದಕ್ಕಾಗಿ ಅಲ್ಲ, ನಾವು ಚೆನ್ನಾಗಿ ಕಾಣುವುದಕ್ಕೆ ಬದುಕಬಾರದು, ಬದುಕನ್ನು ಚೆನ್ನಾಗಿ ಮಾಡುವುದಕ್ಕೆ ಬದುಕಬೇಕು, ಜಗತ್ತಿನಲ್ಲಿ ಕೆಲಸವಿಲ್ಲ ಎಂದರೆ ಅದು ಜೀವನವೇ ಅಲ್ಲ, ಈ ಭೂಮಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಿರಂತರ ಕಾರ್ಯಗಳು ನಡೆಯುತ್ತಲೇ ಇವೆ. ಎಲ್ಲವನ್ನು ಕೊಡುವ ನಿಸರ್ಗ, ಕ್ರಿÃಮಿ ಕೀಟಗಳು ಹಾಗೂ ನಾವು ಪೂಜಿಸುವ ದೇವರು ಕೂಡಾ ಯಾವ ರೂಪದಲ್ಲಿರುತ್ತಾನೆ.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಶ್ರಿÃಕಾಂತ ಕುಲಕರ್ಣಿ, ಮಾಜಿ ವಿಧಾನ ಪರಿಷತ ಸದಸ್ಯ ಜಿ.ಎಸ್.ನ್ಯಾಮಗೌಡ, ಕಾಜಿಬೀಳಗಿ ಗೂಳೇಶ್ವರ ಆಶ್ರಮ ಚಿನ್ಮಯಾನಂದ ಮಹಾಸ್ವಾಮಿಗಳು ಮಾತನಾಡಿದರು. ಚಿಕ್ಕಲಕಿಕ್ರಾಸ್ ಭಗೀರಥ ಪೀಠ ಶಿವಾನಂದ ಮಹಾಸ್ವಾಮಿಗಳು, ಆನಂದ ನ್ಯಾಮಗೌಡ, ಜಕ್ಕಪ್ಪ ಯಡವೆ, ಮುತ್ತಣ್ಣ ಶಿವಣ್ಣವರ ಕಮಲಕ್ಕ ಜೇಡರ, ಶ್ರಿÃಮಂತ ಚೌರಿ, ಅನೀಲ ಅವಳೆ, ದರೆಪ್ಪ ಗುಗ್ಗರಿ ಸೇರಿದಂತೆ ಅನೇಕರು ಇದ್ದರು.

loading...