ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

0
17
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಹಮ್ಮಿಗಿ, ಮುಂಡವಾಡ, ಕೆರಳ್ಳಿತಾಂಡಾ, ಬಿದರಹಳ್ಳಿ ಗ್ರಾಮದ ಕೆಲ ರೈತರು ಹಮ್ಮಿಗಿ-ಮುಂಡವಾಡ ಏತ ನೀರಾವಾರಿ ಪಂಪ್‍ಹೌಸ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಮುಖಂಡ ಚಿನ್ನಪ್ಪಗೌಡ ಪಾಟೀಲ ಮಾತನಾಡಿ, ಹಮ್ಮಿಗಿ ಬಳಿಯ ತುಂಗಭದ್ರಾ ನದಿಯಿಂದ ಏತ ನೀರಾವರಿ ಮೂಲಕ ಹಮ್ಮಿಗಿ, ಮುಂಡವಾಡ, ಬಿದರಹಳ್ಳಿ, ಕೆರಳ್ಳಿತಾಂಡಾ ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ನಿಟ್ಟಿಯಲ್ಲಿ 4 ವರ್ಷಗಳ ಹಿಂದೆ ರೈತರ ಭೂಮಿಯನ್ನು ಸರ್ಕಾರವು ಸ್ವಾಧೀನ ಪಡೆಸಿಕೊಂಡು ಕಾಲುವೆಯನ್ನು ನಿರ್ಮಿಸಿದ್ದಾರೆ. ಆದರೆ, ಇದುವರೆಗೂ ಯಾವಬ್ಬ ರೈತರಿಗೂ ಪರಹಾರ ದೊರೆತಿಲ್ಲ ಎಂದರು.ಹೋರಾಟಗಾರ ವೈ.ಎನ್.ಗೌಡರ ಮಾತನಾಡಿ, ಹೂವಿನಹಡಗಲಿ ತಾಲೂಕಿನಲ್ಲಿ 49ಸಾವಿರ ಎಕರೆ ನೀರಾವರಿ ಪ್ರದೇಶವಿದೆ. 2.16ಲಕ್ಷ ಎಕರೆ ಮುಂಡರಗಿ ಭಾಗದ ಜಮೀನುಗಳು ನೀರಾವರಿಗೆ ಒಳಪಟ್ಟಿವೆ. ಅತೀ ಹೆಚ್ಚು ಭೂಮಿ ಕಳೆದುಕೊಂಡಿದ್ದು ಮುಂಡರಗಿ ತಾಲೂಕಿನ ರೈತರಯ. ಇಲ್ಲಿ ಭೂಸ್ವಾಧೀನ ಅಧಿಕಾರಿಗಳ ಕಾರ್ಯಾಲಯ ಮಾಡುವುದನ್ನು ಬಿಟ್ಟು ಕಡಿಮೆ ಪ್ರದೇಶ ಕಳೆದುಕೊಂಡ ಹೂವಿನಹಡಗಲಿಯಲ್ಲಿ ಭೂಸ್ವಾಧೀನ ಕಾರ್ಯಾಲಯ ಮಾಡಿರುವುದರಿಂದ ಪರಿಹಾರ ಪಡೆಯುವಂತ ರೈತರು ನಿತ್ಯ ಬೇರೊಂದು ತಾಲೂಕಿಗೆ ಅಲೆದಾಡುವಂತ ಪರಿಸ್ಥಿತಿ ಇಲ್ಲಿಯ ರೈತರಿಗೆ ಬಂದಿದೆ ಎಂದರು.
ರೈತ ಶೇಖಪ್ಪ ಬಾಲೆಹೊಸೂರ ಮಾತನಾಡಿ, ಭೂಮಿ ಕಳೆದುಕೊಂಡ ರೈತರು ಪರಿಹಾರ ನೀಡಬೇಕೆಂದು ಒತ್ತಾಯಿಸಿ 4 ವರ್ಷಗಳಿಂದ ನಿರಂತರ ನೀರಾವರಿ ಇಲಾಖೆ, ಜಿಲ್ಲಾಧಿಕಾರಿ, ತಹಸೀಲ್ದಾರ್, ಮೊದಲಾದವರ ಬಳಿ ಹೋದರೂ ನಮಗೆ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ನೀರಾವರಿ ಇಲಾಖೆಯ ಇಇ ರಾಠೋಡ ಹಾಗೂ ಎಇಇ ಹನುಮಂತಪ್ಪ ಭೇಟಿ ನೀಡಿ ಚರ್ಚಿಸಿದರು. ಪ್ರತಿಕ್ರಿಯಿಸಿ ಇಇ ರಾಠೋಡ್, ಕಾಲುವೆಗೆ ಭೂಸ್ವಾಧೀನ ಮಾಡಿಕೊಂಡ ಬಗ್ಗೆ ಸರ್ಕಾರಕ್ಕೆ ಈಗಾಗಲೆ ವರದಿಯನ್ನು ಸಲ್ಲಿಸಿದ್ದೇವೆ. ಕೆಲ ತಾಂತ್ರಿಕ ದೋಷದಿಂದ ತೊಂದರೆಯಾಗಿದೆ. ಇನ್ನು 6 ತಿಂಗಳದೊಳಗೆ ಪರಿಹಾರ ನೀಡುವ ಕೆಲಸ ಮಾಡುತ್ತೇವೆ. ಅಲ್ಲಿಯವರೆಗೂ ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ರೈತರು ಪ್ರತಿಭಟನೆಯನ್ನು ಹಿಂಪಡೆದರು. ಮಲ್ಲಿಕಾರ್ಜುಗೌಡ ಪಾಟೀಲ, ನಿಂಗನಗೌಡ ಪಾಟೀಲ, ಡಿ.ಎಸ್.ಆರೇರ, ಎಚ್.ಎ.ಪಾಟೀಲ, ನಾಗರಾಜ ಮದ್ದೀನ್, ಹುಚ್ಚಪ್ಪ ಕರಿಗಾರ, ದುದ್ದು ಹಣಗಿ, ಶ್ರೀಕಾಂತಗೌಡ ಪಾಟೀಲ, ಸಿದ್ದಪ್ಪ ಕರಿಗಾರ, ಮತ್ತಿತರರು ಇದ್ದರು.

loading...