ಭ್ರಷ್ಟಾಚಾರ ಪ್ರಕರಣ: ಸೆ.10ರೊಳಗೆ ವರದಿ ನೀಡಲು ಜಿಲ್ಲಾಧಿಕಾರಿ ಆದೇಶ

0
0
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ನಗರ ಸಭೆಯಲ್ಲಿ ಹಿಂದಿನ ಅಧಿಕಾರಿಗಳಿಂದ ತನಿಖೆ ನಡೆದು ಸಾಬೀತಾದ ಭ್ರಷ್ಟಾಚಾರ ಪ್ರಕರಣವನ್ನು ಪುನರ್‌ ತನಿಖೆ ನಡೆಸಿ ಸೆ.10ರೊಳಗೆ ತಮಗೆ ವರದಿ ಸಲ್ಲಿಸುವಂತೆ ತಿನಿಖಾಧಿಕಾರಿ ಹಾಗೂ ಕೊಪ್ಪಳ ಜಿಲ್ಲಾ ಯೋಜನಾ ನಿರ್ದೇಶಕ ವಿಜಯಕುಮಾರಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ ಗಡುವು ನೀಡಿದರು.
ಪ್ರಥಮ ಬಾರಿಗೆ ಜಿಲ್ಲಾಧಿಕಾರಿಗಳಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಗಂಗಾವತಿ ನಗರಕ್ಕೆ ಭೇಟಿ ನೀಡಿ ನಗರ ಸಭೆ ಅಧಿಕಾರಿಗಳ ಮತ್ತು, ಜೆಇ ಹಾಗೂ ಸಿಬ್ಬಂದಿಗಳೊಂದಿಗೆ ನಗರದಾದ್ಯಂತ ಸಂಚರಿಸಿ ರಸ್ತೆ, ಚರಡಂಡಿ,ಸ್ವಚ್ಛತೆ ವ್ಯವಸ್ಥೆ ಪರಿಶೀಲಿಸಿದ ಬಳಿಕ ಇಲ್ಲಿಯ ಸೆಕ್ರ್ಯೂಟ್‌ ಹೌಸ್‌ನಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಸೆ.10ರೊಳಗೆ ಹಿಂದಿನ ಭ್ರಷ್ಠಾಚಾರ ನಡೆದ ಬಗ್ಗೆ ಯಾರ ಒತ್ತಡಕ್ಕೆ ಮಣಿಯದೇ ಪಾರದರ್ಶಕವಾಗಿ ಪುನರ್‌ ತನಿಖೆ ನಡೆಸಿ ಪೂರಕ ದಾಖಲಾತಿಗಳೊಂದಿಗೆ ಮುಂದಿನ ತಿಂಗಳ ದಿ.10ರೊಳಗೆ ತಮ್ಮ ಕಛೇರಿಗೆ ವರದಿ ಸಲ್ಲಿಸಬೇಕೆಂದು ಪಿಡಿಗೆ ಸೂಚಿಸಿದರು.
ಪುನರ್‌ ತಿನಿಖಾ ವರದಿ ತಮ್ಮ ಕಚೇರಿಗೆ ಸಲ್ಲಿಕೆಯಾದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ
ನಗರದ ಸೆಕ್ರ್ಯೂಟ್‌ಹೌಸ್‌ನಲ್ಲಿ ಗಂಗಾವತಿ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿ ಹಿಂದಿನ ಮತ್ತು ಪ್ರಸಕ್ತ ಸಾಲಿನ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಕಲ ಯೋಜನೆಗಳನ್ನು ಕಾರ್ಯಮಿತಿಯೊಳಗೆ ಅನುಷ್ಠಾನಕ್ಕೆ ತರಬೇಕು. ಆಲಸ್ಯ ಧೋರಣೆ, ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ. ಕಾಲುವೆಗೆ ಕಾವಲು
ಎಡದಂಡೆ ನಾಲೆಯ ಕೆಳಮಟ್ಟದ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜಮೀನಿಗೆ ನೀರು ತಲುಪಲು ನಮ್ಮ ವ್ಯಾಪ್ತಿಯಲ್ಲಿನ ಮುಖ್ಯ ನಾಲೆ ಹಾಗೂ ಮುಖ್ಯ ವಿತರಣಾ ಕಾಲುವೆಗಳ ಜಾಕ್‌ವೆಲ್‌ಗಳ ಮೇಲೆ ನೀರಾವರಿ, ಕಂದಾಯ ಇಲಾಖೆಯ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ನಿತ್ಯ ಇಡಿ ರಾತ್ರಿ ಗಸ್ತಿ ತಿರಗಲು ಸೂಚಿಸಿದೆ. ಅಲ್ಲದೇ ವಿತರಣಾ ಕಾಲುವೆ ಜಾಕ್‌ವೆಲ್‌ನಿಂದ ನಿಯಮದಂತೆ ನೀರು ಪೂರೇಕೆಗೆ ನಿಗಾ ವಹಿಸಲು ಆಯಾ ವಿತರಣಾ ಜಾಕವೆಲ್‌ ಬಳಿಕಂದಾಯ, ನೀರಾವರಿ ಇಲಾಖೆ ಸಿಬ್ಬಂದಿಗಳನ್ನ ಹಾಗೂ ಪೊಲೀಸರನ್ನ ಸರದಿಯಂತೆ ಕಾವಲು ಹಾಕಲಾಗಿದೆ. ಮುಖ್ಯ ನಾಲೆಯ ಎಡ ಭಾಗದುದ್ದಕ್ಕೂ ತಮ್ಮ ಕೃಷಿ ಚಟುವಟಿಕೆಗೆ ನಾಲೆ ನೀರು ಖದಿಯುವರ ಮತ್ತು ಜಾಕ್‌ ವೆಲ್‌ ಮೂಲಕ ನಿಗದಿಗಿಂತ ಹೆಚ್ಚು ನೀರು ಹರಿಸಿಕೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.
ಪಿ.ಸುನೀಲ್‌ ಕುಮಾರ, ಜಿಲ್ಲಾಧಿಕಾರಿ, ಕೊಪ್ಪಳ.

loading...