ಮಕ್ಕಳಲ್ಲಿ ಧೈರ್ಯ ತುಂಬುವ ಶಿಕ್ಷಣ ಅವಶ್ಯ: ಡಾ.ಗುರುರಾಜ

0
7
loading...

ವಿಜಯಪುರ : ಮಕ್ಕಳಲ್ಲಿ ಧೈರ್ಯ, ಉದಾತ್ತ ಧ್ಯೇಯಗಳನ್ನು ತುಂಬುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಖ್ಯಾತ ಶಿಕ್ಷಣ ತಜ್ಞ, ಲೋಕ ಶಿಕ್ಷಣ ಟ್ರಸ್ಟ್‌ ಧರ್ಮದರ್ಶಿ ಡಾ.ಗುರುರಾಜ ಕರ್ಜಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರದ ಸಜ್ಜನ ಗಾಣಿಗೇರ ಸೇವಾ ಸಂಘದ ಎಸಿಟಿ-ಶಾರದಾ ಪಬ್ಲಿಕ್‌ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಋಷಿ, ಮುನಿಗಳಲ್ಲಿ ಅಪಾರವಾದ ಧೈರ್ಯವಿತ್ತು, ಈ ಕಾರಣದಿಂದಾಗಿ ಅವರಲ್ಲಿ ಜ್ಞಾನಭಂಡಾರ, ಪಾಂಡಿತ್ಯವೂ ಅಧಿಕವಾಗಿತ್ತು. ಮಕ್ಕಳಲ್ಲಿ ಧೈರ್ಯ ತುಂಬುವ ಶಿಕ್ಷಣ ನೀಡಬೇಕಾಗಿದೆ ಎಂದರು.
ಎಸಿಟಿ ಶಾರದಾ ಪಬ್ಲಿಕ್‌ ಶಾಲೆಯ ಹತ್ತು ಹೆಜ್ಜೆಗಳನ್ನು ಇರಿಸಿದೆ, ಇನ್ನೂ ಸಾವಿರಾರು ಹೆಜ್ಜೆಗಳನ್ನು ಇರಿಸುವ ಮೂಲಕ ಶಿಕ್ಷಣ ರಂಗಕ್ಕೆ ಅಮೋಘ ಕೊಡುಗೆ ನೀಡಬೇಕಿದೆ. ಕ್ರೀಯಾಶೀಲ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣ ಈ ಸಂಸ್ಥೆಯಲ್ಲಿ ಬೋಧಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.
ಚಿತ್ರದುರ್ಗ ವನಶ್ರೀ ಮಠದ ಡಾ.ಬಸವಕುಮಾರ ಸ್ವಾಮಿಗಳು, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ, ಮಾಜಿ ಶಾಸಕ ಆರ್‌.ಆರ್‌. ಕಲ್ಲೂರ, ಎಂ.ಎಂ. ಸಜ್ಜನ, ಮಲ್ಲಿಕಾರ್ಜುನ ಸಜ್ಜನ, ಚಿನ್ನಪ್ಪ ಸಜ್ಜನ, ಅಶೋಕ ಸಜ್ಜನ, ವಿವೇಕ ಸಜ್ಜನ ಮೊದಲಾದವರು ಪಾಲ್ಗೊಂಡಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂ.ಗು. ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು.

loading...