ಮಕ್ಕಳ ಬದುಕಿಗೆ ದಾರಿದೀಪವಾಗುವ ಶಿಕ್ಷಣ ಅವಶ್ಯ: ಹೊರಟ್ಟಿ

0
6
loading...

ಕನ್ನಡಮ್ಮ ಸುದ್ದಿ-ಅಳ್ನಾವರ: ಮಕ್ಕಳ ಭವಿಷ್ಯ ರೂಪಿಸುವ ಹಾಗೂ ಅವರ ಬದುಕಿಗೆ ದಾರಿದೀಪವಾಗುವ ಶಿಕ್ಷಣ ಪದ್ದತಿ ಇಂದಿನ ಅಗತ್ಯತೆ . ಶಿಕ್ಷಕರು ಸಂಸ್ಕಾರಯುತ ಶಿಕ್ಷಣ ಭೋದಿಸುವ ಕಡೆ ಹೆಚ್ಚು ಗಮನ ನೀಡಬೇಕು ಎಂದು ವಿಧಾನ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ದಿ ನ್ಯೂ ಇಂಗ್ಲೀಷ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಆಧೀನ ಸಂಸ್ಥೆಗಳ ಸಿಬ್ಬಂದಿ ಆಯೋಜಿಸಿದ್ದ ” ಶಿಕ್ಷಣದ ಸವಾಲುಗಳು ,ಸಾಧ್ಯತೆಗಳು ” ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಗಳಲ್ಲಿ ಕಡ್ಡಾಯವಾಗಿ ಮಾತ್ರುಭಾಷೆ ಕಲಿಕಾ ಪದ್ದತಿ ಅಳವಡಿಸಬೇಕು . ಶಿಕ್ಷಣ ಕ್ಷೇತ್ರವನ್ನು ವೈಶಿಷ್ಟಪೂರ್ಣಗೊಳಿಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದರು.
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಶಾಂತಿನಾಥ ದಿಬ್ಬದ ಮಾತನಾಡಿ, ಮಕ್ಕಳಲ್ಲಿ ಕುಶಲತೆ ಬೆಳೆಸುವ ಬೋಧನೆ ಅಗತ್ಯವಿದೆ ಎಂದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ವಿ. ಸೋಮಾಪೂರ ಅಧ್ಯಕ್ಷತೆ ವಹಿಸಿದ್ದರು. ಸ್ಥಳಿಯ ಅನ್ನಪೂರ್ಣ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಎಂ.ಸಿ. ಹಿರೇಮಠ, ನಿವೃತ್ತ ಶಿಕ್ಷಣಾಧಿಕಾರಿ ಎಚ್. ಬಿ .ಕೊಡ್ಲಿ, ಜೆಡಿಎಸ್ ಮುಖಂಡ ಫಹೀಮ ಕಂಟ್ರ್ಯಾಕ್ಟರ, ಶಿಕ್ಷಕ ಜೆ.ಆರ್. ಕುರಕುರಿ ಇದ್ದರು.
ಶಿಕ್ಷಕ ಸಿಬ್ಬದಿ ವತಿಯಿಂದ ಬಸವರಾಜ ಹೊರಟ್ಟಿ ಅವರ ಸತ್ಕಾರ ನಡೆಯಿತು, ಪ್ರಾಂಶುಪಾಲ ಎಂ.ಬಿ. ಕೊಟೆನ್ನವರ ಸ್ವಾಗತಿಸಿದರು. ಎಚ್ .ಜಿ. ಸಾಲಿ ವಂದಿಸಿದರು.

loading...