ಮಗುವಿನ ಮರ್ಮಾಂಗ ಕೊಯ್ದು ಕೊಲೆ ಪ್ರಕರಣ

0
11
loading...

ರಬಕವಿ-ಬನಹಟ್ಟಿ,ಆ೮:ಸಮೀಪದ ಬಂಡಿಗಣಿ ಗ್ರಾಮದಲ್ಲಿ ಕೇವಲ ೪ ವರ್ಷದ ಮುಗ್ಧ ಬಾಲಕನನ್ನು ಒಂದು ರೂ. ನಾಣ್ಯದ ಆಸೆ ತೋರಿಸಿ ರಸ್ತೆ ಬದಿಯಿದ್ದ ಕಬ್ಬು ಬೆಳೆದ ತೋಟಕ್ಕೆ ಕರೆದುಕೊಂಡು ಕುತ್ತಿಗೆ, ಗಲ್ಲ, ಮರ್ಮಾಂಗ ಕೊಯ್ದು ಕೊಲೆ ಮಾಡಿದ ಸೈಕೋ ಆರೋಪಿ ಸಾಬು ಕಟಗೇರಿ ಅಲಿಯಾಸ್ ಜಕಾತಿಯ ಬಂಧನಕ್ಕೆ ಎರಡು ಪ್ರತ್ಯೆÃಕ ಪೊಲೀಸ್ ತಂಡಗಳನ್ನು ರಚನೆ ಮಾಡಿ ಜಾಲ ಬೀಸಿದ್ದು, ಆರೋಪಿಯ ಸುಳಿವು ದೊರೆತಿದ್ದು, ಶೀಘ್ರವೇ ಬಂಧನ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಗುವಿನ ಈ ಅಮಾನವೀಯ ಕೊಲೆ ಪ್ರಕರಣ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ತೀವ್ರ ವಿರೋಧದೊಂದಿಗೆ ಜನತೆ ಮಮ್ಮಲ ಮರಗುವಲ್ಲಿ ಕಾರಣವಾಗಿದೆ. ಅಲ್ಲದೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜನತೆಯ ಒತ್ತಾಯವಾಗಿದೆ. ವಿಚಿತ್ರ ಸ್ವಭಾವದ ವ್ಯಕ್ತಿಗೆ ಮಗುವೊಂದು ಬಲಿಯಾಗಿರುವದು ವಿಪರ್ಯಾಸದ ಸಂಗತಿಯಾಗಿದೆ.

loading...