ಮಠಾದೀಶರಿಂದಲೆ ಭಾರತೀಯ ಸಂಸ್ಕøತಿ, ಪರಂಪರೆ ಜೀವಂತ: ಮೋಹನ

0
5
loading...

ಕನ್ನಡಮ್ಮ ಸುದ್ದಿ-ಧಾರವಾಡ: ಪಾಶ್ಚಾತ್ಯ ಸಂಸ್ಕೃತಿ ದೇಶದ ಯುವ ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದ್ದು, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತೆ ತಲೆ ಎತ್ತಿ ನಿಲ್ಲಲು ಮಠಾದೀಶರು ಟೊಂಕ ಕಟ್ಟಿ ನಿಲ್ಲಬೇಕಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.
ಮುರುಘಾಮಠದಲ್ಲಿ ಆಯೋಜಿಸಿದ್ದ ಮುರುಘರಾಜೇಂದ್ರ ಪ್ರಸಾದ ನಿಲಯ ಶತಮಾನೋತ್ಸವ ಹಾಗೂ ಶ್ರಾವಣ ಪ್ರಯುಕ್ತ ಮೃತ್ಯುಂಜಯ ಲೀಲಾವಿಲಾಸ ಪ್ರವಚನದಲ್ಲಿ ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಮುರುಘಾಮಠದ ಪ್ರಸಾದ ನಿಲಯ ಆರಂಭವಾಗದಿದ್ದರೆ, ಎಷ್ಟೋ ಜನ ಶಿಕ್ಷಣದಿಂದ ವಂಚಿತರಾಗಬೇಕಿತ್ತು. ಸಿದ್ದಗಂಗಾ ಮಠ ಬಿಟ್ಟರೇ ನಾಡಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಪೋಷಿಸಿದ್ದು ಮುರುಘಾಮಠ. ಮುರುಘಾಮಠ ತನ್ನ ಪ್ರಸಾದ ನಿಲಯದ ಶತಮಾನೋತ್ಸವದ ಸಂದರ್ಭದಲ್ಲಿ ನೂರಾರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುತ್ತಿದೆ. ಇದು ಯಾವುದೇ ವಿಶ್ವವಿದ್ಯಾಲಯ ಮಾಡುವ ಕೆಲಸಕ್ಕಿಂತ ಕಡಿಮೆ ಇಲ್ಲ ಎಂದರು. ಬಾಲ್ಕಿ ಮಠದ ಬಸವಲಿಂಗ ಪಟ್ಟದ್ದೆವರು ಮಾತನಾಡಿ, ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಮರು ನಿರ್ಮಾಣ ಮಾಡಿದವರು ಚನ್ನಬಸವ ಪಟ್ಟದ್ದೆವರು. ಅವರಿಗೆ ಪ್ರೇರಣೆಯಾಗಿದ್ದವರು ಮುರುಘಾಮಠದ ಮೃತ್ಯುಂಜಯ ಶ್ರೀಗಳು ಎಂದು ಹೇಳಿದರು. ಹೂವಿನ ಹಡಗಲಿ ಗವಿಮಠದ ಶಾಂತವೀರ ಶ್ರೀ ಮಾತನಾಡಿ, ಜೀವನದಲ್ಲಿ ಅನುಭವ ದೊಡ್ಡದು. ಅದೇ ಬದುಕು ಕಟ್ಟಿಕೊಡುತ್ತದೆ. ಎಲ್ಲ ಅನುಭವ ಇದೆ ಎಂದು ಏನೇನೋ ಮಾಡಲು ಹೋಗಬಾರದು. ಜೀವನವು ರಸಪಾಕ ಇದ್ದಹಾಗೇ. ಅದಕ್ಕೊಂದಿಷ್ಟು ಭಕ್ತಿ ಬೆರೆಸಿದರೆ ಸುಂದರ ಎಂದರು.
ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಶ್ರೀ, ಶಿವಮೊಗ್ಗ ಬಸವಕೇಂದ್ರದ ಮರುಳಸಿದ್ದ ಶ್ರೀ, ಹಂಸಭಾವಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಬಸವಣ್ಣನಿಂದಲೇ ಬದುಕಿತ್ತು ಲೋಕವೆಲ್ಲ, ವಚನ ಸಾಹಿತ್ಯ ದರ್ಶನ ಹಾಗೂ ಯುಗದ ಶಕ್ತಿ ಗ್ರಂಥಗಳನ್ನು ಮುರುಘಾಮಠದ ಮಲ್ಲಿಕಾರ್ಜುನ ಲೋಕಾರ್ಪಣೆ ಮಾಡಿದರು.

loading...