ಮನಗೂಳಿ ಸಂಗನಬಸವಶ್ರಿÃ ನೇತೃತ್ವದಲ್ಲಿ ಸಚಿತ್ರಸ್ತರ ನಿಧಿ ಸಂಗ್ರಹ

0
7
loading...

ಬಸವನಬಾಗೇವಾಡಿ: ಕೊಡಗು ಹಾಗೂ ಕೇರಳ ರಾಜ್ಯದ ವಿವಿಧೆಡೆ ಅತೀವೃಷ್ಠಿಯಿಂದ ಸಮಸ್ಯೆಗೆ ಸಿಲುಕಿದ ನೆರೆ ಪೀಡಿತ ಪ್ರದೇಶದ ಜನತೆಗಾಗಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಹಿರೇಮಠದ ಸಂಗನಬಸವ ಮಹಾಸ್ವಾಮೀಜಿ ನೇತೃತ್ವದಲ್ಲಿ ಯುವಶಕ್ತಿ ಸಂಘಟನೆ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂತ್ರಸ್ತರ ನಿಧಿ ಸಂಗ್ರಹಿಸಿದರು.
ಸಂತ್ರಸ್ಥರ ನಿಧಿಗೆ ದೇಣಿಗೆ ಹಾಕಿ ಚಾಲನೆ ನೀಡಿದ ಹಿರೇಮಠದ ಸಂಗನಬಸವ ಮಹಾಸ್ವಾಮೀಜಿ ಮಾತನಾಡಿ ಮಳೆರಾಯ ಮತ್ತು ಪ್ರಕೃತಿ ದೇವನ ಅಟ್ಟಹಾಸದಿಂದ ಕೊಡಗು ಜಿಲ್ಲೆಯಲ್ಲಿ ಹಾಗೂ ನೆರೆಯ ಕೇರಳ ರಾಜ್ಯದ ಜನತೆ ಇಕ್ಕಟ್ಟಿನ ವಾತಾವರಣದಲ್ಲಿ ಸಿಲುಕಿದ್ದು ಮನೆಗಳನ್ನು ಕಳೆದುಕೊಳ್ಳುವ ಜೊತೆಗೆ ಊಟ-ವಸತಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ನೋವಿನ ಸಂಗತಿಯಾಗಿದ್ದು ಅಲ್ಲಿಯ ಜನರಿಗಾಗಿ ಹಣ ಹಾಗೂ ಅವಶ್ಯಕ ವಸ್ತುಗಳನ್ನು ದಾನ ಮಾಡುವ ಮುಖಾಂತರ ಮಾನವೀಯತೆ ಮೆರೆಯಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಂಗಯ್ಯ ನಂದಿಕೋಲಮಠ, ಪ್ರತಾಪ ಹಜೇರಿ, ಬಸಯ್ಯ ನಂದಿಕೋಲಮಠ, ಗಜಾನನ ಮೇಟಿ, ಸಂಗಮೇಶ ಹಚ್ಚಡದ, ಸಂತೋಷ ಬೊಮ್ಮನ್ನವರ, ಮಹಾಂತೇಶ ತಳೇವಾಡ, ಶರಣಯ್ಯ ನಂದಿಕೋಲಮಠ, ಪುಟ್ಟು ತೇಲಿ, ಯುವಶಕ್ತಿ ಸಂಘಟನೆ ಅಧ್ಯಕ್ಷ ರಮೆಶ ವಡ್ಡೊÃಡಗಿ, ವೈಭವ ಜಂಗಮಶೆಟ್ಟಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

loading...