ಮನುಷ್ಯನಿಗೆ ಆರೋಗ್ಯ ಮುಖ್ಯ: ಶಿವಾನಂದ

0
5
loading...

ಬಸವನಬಾಗೇವಾಡಿ: ಮನುಷ್ಯನ ಜೀವನದಲ್ಲಿ ಕ್ರಿÃಡೆ ಮಹತ್ವದಾಗಿದ್ದು, ಮನುಷ್ಯನಿಗೆ ಎಲ್ಲ ಭಾಗ್ಯಕ್ಕಿಂತಲೂ ಆರೋಗ್ಯ ಭಾಗ್ಯವೇ ಮುಖ್ಯವಾಗಿದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ಜೆಒಸಿಸಿ ಬ್ಯಾಂಕಿನ ನಿರ್ದೆÃಶಕ ಶಿವಾನಂದ ಮಂಗಾನವರ ಹೇಳಿದರು.
ತಾಲೂಕಿನ ಬೊಮ್ಮನಹಳ್ಳಿ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಅವರಣದಲ್ಲಿ ನಡೆದ ಇಂಗಳೇಶ್ವರ ವಲಯಮಟ್ಟದ ಕ್ರಿÃಡಾಕೂಟ ಸಮಾರಂಭದಲ್ಲಿ ಮಾತನಾಡಿದ ಅವರು ಆರೋಗ್ಯವಾಗಿ ಇಲ್ಲದಿದ್ದರೆ ನಾವು ಏನು ಮಾಡಲು ಸಾಧ್ಯವಿಲ್ಲ, ನಮ್ಮ ಗುರು-ಹಿರಿಯರು ಕೂಡಾ ಆರೋಗ್ಯಕ್ಕೆ ಮಹತ್ವ ನೀಡಿ ಆರೋಗ್ಯ ಭಾಗ್ಯ ಎಂದಿದ್ದಾರೆ, ಪಠ್ಯೆÃತರ ಚಟುವಟಿಕೆಯಷ್ಟೆÃ ಕ್ರಿÃಡೆಯಲ್ಲಿನ ಆಟೋಟಗಳು ಮಹತ್ವದಾಗಿವೆ ಎಂದು ಹೇಳಿದರು.

ಕ್ರಿÃಡೆ ಮಕ್ಕಳ ಸರ್ವೊÃತ್ತೊಮುಖ ಬೆಳವಣೆಗೆಗೆ ಪೂರಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಓದುವಿನೊಂದಿಗೆ ಕ್ರಿÃಡೆಯಲ್ಲಿ ಆಸಕ್ತಿ ತೋರಬೇಕು, ಕ್ರಿÃಡೆಯಿಂದ ಏಕಾಗ್ರತೆ, ಮನೋಬಲ ಹೆಚ್ಚಿಸುವುದರೊಂದಿಗೆ ಮಗುವಿನ ಶಾರೀರಿಕ, ಸಾಮಾಜಿಕ, ಮಾನಸಿಕ ಹಾಗೂ ಬೌದ್ಧಿಕ ವಿಕಾಸದಲ್ಲಿ ಆಟಗಳು ಉಪಯುಕ್ತವಾಗಿವೆ ಎಂದು ಹೇಳಿದರು.
ಸಮಾರಂಭದ ಸಾನಿಧ್ಯವನ್ನು ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಮಹಾಸ್ವಾಮೀಜಿ ವಹಿಸಿದರು, ಅಶೋಕ ನೇಗಿನಾಳ ಅಧ್ಯಕ್ಷತೆವಹಿಸಿದರು. ನ್ಯಾಯವಾದಿ ರವೀಂದ್ರ ಭಾವಿಕಟ್ಟಿ, ಸಿದ್ಧನಗೌಡ ಪಾಟೀಲ, ನೀಲಪ್ಪ ವಾಲಿಕಾರ ಸೇರಿದಂತೆ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ವಿವಿಧ ಶಾಲೆಗಳ ಶಿಕ್ಷಕರು ನೂರಾರು ವಿದ್ಯಾರ್ಥಿಗಳು ಪಾಲಕರು ಕರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಎನ್.ಜಿ. ಓಜಿ ನಿರೂಪಿಸಿದರು, ಮುಖ್ಯಶಿಕ್ಷಕ ಆರ್.ಎಚ್. ಪಾಟೀಲ ಸ್ವಾಗತಿಸಿ ವಂದಿಸಿದರು.

loading...