ಮಲಪ್ರಭಾ ನದಿಯಲ್ಲಿ ಮೊಸಳೆ ಸ್ಥಳೀಯರು ಆಂತಕ

0
2
loading...

ಮಲಪ್ರಭಾ ನದಿಯಲ್ಲಿ ಮೊಸಳೆ ಸ್ಥಳೀಯರು ಆಂತಕ

ಕನ್ನಡಮ್ಮ ಸುದ್ದಿ- ಬೈಲಹೊಂಗಲ:- ಸಮೀಪದ ಮಲಪ್ರಭಾ ಹಿನ್ನಿÃರು ಪ್ರದೇಶದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ನದಿಯಲ್ಲಿರುವ ಮೊಸಳೆಗಳು ಹೊರಬರುತ್ತಿದ್ದು, ಯಕ್ಕುಂಡಿ, ಮಲ್ಲೂರ, ಬಡ್ಲಿ, ಹೊಸೂರ, ಇಂಗಳಗಿ, ಮಾಟೋಳ್ಳಿ. ವಕ್ಕುಂದ ಗ್ರಾಮದ ರೈತರು, ಜನರು ಜಾಗೃತಿವಹಿಸುವಂತೆ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಯಕ್ಕುಂಡಿ, ಮಲ್ಲೂರ, ಬಡ್ಲಿ, ಹೊಸೂರ ಗ್ರಾ.ಪಂ.ಗಳ ಪಿಡಿಒಗಳಿಗೆ ಲಿಖಿತ ಹೇಳಿಕೆ ನೀಡಲಾಗಿದೆ. ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ತಮ್ಮ ಗ್ರಾ.ಪಂ.ವ್ಯಾಪ್ತಿಯಲ್ಲಿ ಹಾಗೂ ಮಲಪ್ರಭಾ ನದಿ ದಡದಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಮೊಸಳೆಯಿಂದ ಎಚ್ಚರಿಕೆವಹಿಸುವಂತೆ ತಿಳುವಳಿಕೆ ಮೂಡಿಸಲು ಪ್ರಚಾರ ಮಾಡುವುದು ಮತ್ತು ನಿರ್ಬಂಧಿತ ಸ್ಥಳಗಳಲ್ಲಿ ತೆರಳದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವಂತೆ ತಿಳಿಸಿದ್ದಾರೆ.

loading...