ಮಹಾಂತ ಜೋಳಿಗೆ ಕಲ್ಪನೆ ಅದ್ಬುತವಾದದು: ನ್ಯಾ. ದೇವರಾಜ

0
8
loading...

ಹುನಗುಂದ: ವ್ಯಸನ ಮುಕ್ತ ಸಮಾಜ ಕಲ್ಪನೆ ಮೂಲಕ ದುಶ್ಚಟಗಳನ್ನು ತಮ್ಮ ಜೋಳಿಗೆ ಹಾಕಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಹಾಂತಶ್ರೀಗಳು ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಎಚ್‌.ಎಂ. ದೇವರಾಜ ಹೇಳಿದರು.
ಪಟ್ಟಣದ ಬಸವ ಕೇಂದ್ರ,ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಲಿಂಗೈಕ್ಯ ಮಹಾಂತಶ್ರೀಗಳ ಜನ್ಮ ದಿನದ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ರಕ್ತ ಗುಂಪು ತಪಾಸಣೆ ಹಾಗೂ ಬೃಹತ್‌ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಶ್ರೀಗಳ ಮಹಾಂತ ಜೋಳಿಗೆ ಕಲ್ಪನೆ ಅದ್ಬುತವಾದದ್ದು ಸ್ವಾಮಿಜೀಗಳು ಈ ರೀತಿ ಕಾರ್ಯಗಳನ್ನು ಮಾಡಬಹುದುಎಂದು ತೋರಿಸಿರವುದು ನಮಗೆಲ್ಲ ಮಾದರಿ.ಸಮಾಜಕ್ಕೆ ಒಳ್ಳೇಯ ಗುರು ಅವಶ್ಯ ಎಂದರು.
ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಗುರು ಮಹಾಂತಶ್ರೀಗಳು ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನ,ದೊಡ್ಡಪ್ಪಗಳ ಹೆಸರಿನಲ್ಲಿ ಈ ಕಾರ್ಯ ಮಾಡುವ ಮೂಲಕ ಉತ್ತಮ ಕಾರ್ಯ ಮಾಡೀದ್ದೀರಿ, ಉತ್ತಮಕಾರ್ಯ ಸಮಾಜಕ್ಕೆ ಪ್ರೇರಣೆಯಾಗಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಎಂ.ಎಸ್‌.ಕಡಪಟ್ಟಿ ಮಾತನಾಡಿ ರಕ್ತದಾನದಿಂದ ಮನುಷ್ಯ ಆರೋಗ್ಯದಿಂದ ಇರಲು ಸಾಧ್ಯ.ಒಂದು ಜೀವವನ್ನು ಉಳಿಸಬಹುದು ಮತ್ತು ರಕ್ತ ದಾನದಿಂದ ಹೊಸ ರಕ್ತ ಉತ್ಪತ್ತಿಯಾಗಲು ಸಾಧ್ಯ. ಅಜ್ಜವರ ಆಶೆಯದಂತೆ ಬ್ಲಡ್‌ ಬ್ಯಾಂಕ ಪ್ರಾರಂಭಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಬಿ.ಮೋಹನ ಬಾಬು, ಅಪರ ದಿವಾಣಿ ನ್ಯಾಯಾಧೀಶರಾದಜಗದೀಶಗೌಡರುದ್ರೆ, ಗುರುಬಸವದೇವರು,ಎಸ್‌.ಎನ್‌ ಹುನಕುಂಟಿ ಭಾಗವಹಿಸಿದ್ದರು.
ಸಂದರ್ಭದಲ್ಲಿ 108 ಜನರು ರಕ್ತದಾನ ಮಾಡಿದರು.ಪಟ್ಟಣದ ಶಾಲಾ ಕಾಲೇಜು ಸಂಘ ಸಂಸ್ಥೆಗಳಲ್ಲಿ ಮಹಾಂತಶ್ರೀಗಳ ಜನ್ಮ ದಿನವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಡಾ. ಸುನೀಲ ಬೈರಗೊಂಡ ಸ್ವಾಗತಿಸಿದರು, ಮಲ್ಲಿಕಾರ್ಜುನ ಹವಾಲ್ದಾರ ನಿರೂಪಿಸಿದರು.

loading...