ಮಹಾಮಳೆಗೆ ಜನಜೀವನ ಅಸ್ತವ್ಯಸ್ತ;12 ಮಂದಿ ಸಾವು

0
22

ನವದೆಹಲಿ: ಮಹಾಮಳೆಗೆ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ತತ್ತರಿಸಿ ಹೋಗಿದೆ. ಭಾರೀ ಮಳೆಗೆ ನದಿ ತುಂಬಿ ತುಳುಕುತ್ತಿದೆ. ನದಿ ಪ್ರದೇಶದ ಜನರಿಗೆ ಪ್ರವಾಹದ ಆತಂಕ ಉಂಟಾಗಿದೆ.
ಮಹಾ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ.ನದಿ ದಡದ ನಿವಾಸಿಗಳು ಭಯದಿಂದ ಕಾಲ ಕಳೆಯುತ್ತಿದ್ದಾರೆ.ಇನ್ನು ನದಿ ರಭಸಕ್ಕೆ ಉತ್ತರಾಖಂಡ್‍ನ ಕೋಟ್‍ದ್ವಾರ್‍ದಲ್ಲಿ ಮನೆಯೊಂದು ಕೊಚ್ಚಿ ಹೋಗಿದ್ದು,ಜನರಲ್ಲಿ ಆತಂಕ ಮನೆ ಮಾಡಿದೆ.
ನದಿಯಲ್ಲಿ ಮನೆ ಕೊಚ್ಚಿ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಉತ್ತರಪ್ರದೇಶ ಮತ್ತು ಉತ್ತರಾ ಖಂಡ್‍ನಲ್ಲಿ ಮಹಾಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು,ಇಲ್ಲಿಯವರೆಗೆ 12ಜನರು ಮೃತಪಟ್ಟಿದ್ದು,ಅನೇಕರು ನಾಪತ್ತೆಯಾಗಿದ್ದಾರೆ.

loading...