ಮಹಾ ಮಳೆಗೆ ರದ್ದಾಯ್ತು ಕೇರಳದ ನಾಡ ಹಬ್ಬ

0
5
loading...

ಕೇರಳದ ಸ್ಥಿತಿ ದಿನೇ ದಿನೇ ಶೋಚನೀಯವಾಗ್ತಿದೆ. 94 ವರ್ಷಗಳ ನಂತರ ಅಂದ್ರೆ 1924ನೇ ಇಸವಿಯ ನಂತರದಲ್ಲಿ ಇದೇ ಮೊದಲ ಬಾರಿಗೆ ಕೇರಳದ ಎಲ್ಲಾ 27 ಅಣೆಕಟ್ಟೆಗಳ ಬಾಗಿಲು ತೆರೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾ ಮಳೆಯಿಂದಾಗಿ 30,000 ಮಂದಿ ಅಪಾಯಕ್ಕೆ ಸಿಲುಕಿದ್ದು 20,000 ಮಂದಿ ನಿರಾಶ್ರಿತರಾಗಿದ್ದಾರೆ. 38 ಜನರು ಮೃತಪಟ್ಟಿದ್ದು, 4 ಮಂದಿ ಕಣ್ಮರೆಯಾಗಿದ್ದಾರೆ. ಮಹಾ ಮಳೆ ಕೇರಳದ ನಾಡಹಬ್ಬದ ಸಂಭ್ರಮವನ್ನು ಈ ಬಾರಿ ಇಲ್ಲವಾಗಿಸಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಈ ಬಗ್ಗೆ ಮಹತ್ವದ ಪ್ರಕಟಣೆಯೊಂದನ್ನ ಹೊರಡಿಸಿದ್ದಾರೆ. ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇರುವ ಕಾರಣ ಕೇರಳದ ಪ್ರಮುಖ ಹಬ್ಬವಾದ ಓಣಂ ಆಚರಣೆಗೆ ತಡೆಯೊಡ್ಡಿದ್ದಾರೆ. ಈ ಬಾರಿ ಕೇರಳದಾದ್ಯಂತ ಓಣಂ ಸಂಭ್ರಮಾಚರಣೆ ಮಾಡದಿರುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.

ಕೇರಳದ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆಯಂತೆ. ಓಣಂ ಆಚರಣೆ ಕೇರಳದ ಸಾಂಪ್ರದಾಯಿಕ ಉತ್ಸವಗಳಲ್ಲೊಂದು. ಕೇರಳಕ್ಕೆ ಕಲೆ ಮತ್ತು ಪರಂಪರೆಯನ್ನು ಬಿಂಬಿಸುವ ಓಣಂ ಆಚರಣೆ ಈ ಬಾರಿ ಬೇಡ ಅಂತ ವಿಜಯನ್ ಘೋಷಣೆ ಮಾಡಿದ್ದಾರೆ. ಇಡೀ ರಾಜ್ಯವನ್ನು ಸೂತಕದ ಛಾಯೆ ಆವರಿಸಿರೋದ್ರಿಂದ ಓಣಂ ಸಂಭ್ರಮವನ್ನ ಈ ಬಾರಿ ಮೊಟಕುಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಓಣಂ ಸಂಭ್ರಮಾಚರಣೆಗೆ ಕೇರಳ ಸರ್ಕಾರ ತೆಗೆದಿಟ್ಟಿರುವಂತಾ ಹಣವನ್ನು ಮಳೆಹಾನಿಯುಂಟಾದ ಪ್ರದೇಶಗಳ ಪುನರ್ವಸತಿಗಾಗಿ ಬಳಸಲಾಗುತ್ತದೆಯಂತೆ.

loading...