ಮಾಜಿ ಪ್ರದಾನಿ ವಾಜಪೇಯಿ ನಿಧನಕ್ಕೆ ಸಂತಾಪ

0
5
loading...

ಕನ್ನಡಮ್ಮ ಸುದ್ದಿ-ಅಳ್ನಾವರ: ಇಲ್ಲಿನ ಬಿಜೆಪಿ ಪಕ್ಷ ಶುಕ್ರವಾರ ಹಮ್ಮಿಕೊಂಡ ದಿವಂಗತ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ, ಭಾವಚಿತ್ರಕ್ಕೆ ಪುಷ್ಪ ಹಾಕಿ ಶ್ರದ್ದಾಂಜಲಿ ಅರ್ಪಿಸಲಾಯಿತು.
ಅನೇಕ ಮುಖಂಡರು ಮಾತನಾಡಿ, ವಾಜಪೇಯಿ ವ್ಯಕ್ತಿತ್ವವನ್ನು ಗುಣಗಾನ ಮಾಡಿ ಅವರ ಹೋರಾಟದ ಮನೋಧರ್ಮ ಮತ್ತು ರಾಜಕೀಯ ನೀತಿ ಇಂದಿನ ಯುವಕರಿಗೆ ಅವಶ್ಯವಿದೆ ಎಂದರುಶಕ್ತಿ ಕೇಂದ್ರದ ಅಧ್ಯಕ್ಷ ಲಿಂಗರಾಜ ಮೂಲಿಮನಿ, ನಾರಾಯಣ ಮೋರೆ, ಎಮ್.ಸಿ.ಹಿರೇಮಠ. ಜಯವಂತ ವಾಗಮೋಡೆ, ಶಿವಾಜಿ ಡೊಳ್ಳಿನ, ಕೃಷ್ಣಾ ಅಷ್ಟೇಕರ, ಆಕಾಶ ಕಲಾಲ,ಅಶೋಕ ಬರಗುಂಡಿ, ಅನಂತ ರವಳಪ್ಪನವರ ಅಭಿಮಾನಿಗಳು ಇದ್ದರು.
ಕೋಗಿಲಗೇರಿ: ಗ್ರಾಮದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಮುಖಂಡ ಭರತೇಶ ಪಾಟೀಲ ಮಾತನಾಡಿ, ವಾಜಪೇಯಿ ಅವರ ಆದರ್ಶಮಯ, ಪ್ರಾಮಾಣಿಕ ಮತ್ತು ದೇಶ ಸೇವೆಯ ಬದುಕು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.
ಹೂಲಿಕೇರಿ, ಬೆಣಚಿ, ಕುಂಬಾರಕೊಪ್ಪ ಗ್ರಾಮಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕ.ಸಾ.ಪ : ಅಳ್ನಾವರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿ. ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಧ್ಯಕ್ಷ ಡಾ.ಬಸವರಾಜ ಮೂಡಬಾಗಿಲ, ಗುರುರಾಜ ಸಬನೀಸ, ಸತ್ತಾರ ಬತಖಂಡೆ, ಸುರೇಂದ್ರ ಕಡಕೋಳ, ಶಶಿಕುಮಾರ ಪತಂಗೆ ಇದ್ದರು.

loading...