ಮಾಜಿ ಪ್ರಧಾನಿ ಅಟಲಜೀಗೆ ಸಂತಾಪ

0
14
loading...

ಕನ್ನಡಮ್ಮ ಸುದ್ದಿ-ಕುಕನೂರು: ಮಾಜಿ ಪ್ರದಾನಿ ಅಟಲ್ ಬಿಹಾರಿ ವಾಜಪೆಯವರ ವ್ಯಕ್ತಿತ್ವ ಈಗಿನ ರಾಜಕಿಯ ಭದ್ರಬುನಾದಿಯಾಗಿದೆ. ಮಾಜಿ ಪ್ರಧಾನಿ ಒಬ್ಬ ಧೀಮಂತ ನಾಯಕ. ಅಜಾತ ಶತ್ರು ನಿಷ್ಠಾವಂತ ರಾಜಕರಣಿಯಾಗಿದ್ದರು ಎಂದು ಜಿಲ್ಲಾ ಕಸಪಾ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಹೇಳಿದರು.
ತಾಲೂಕಿನ ದ್ಯಾಂಪೂರ ಗ್ರಾಮದ ವೃತ್ತದಲ್ಲಿ ಶುಕ್ರವಾರ ಸಾರ್ವಜನಿಕರು ಗಣ್ಯರು ಸಭೆಸೇರಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೆಯವರ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು, ಅಟಲಜೀ ಪ್ರಧಾನಿಯಾಗಿದ್ದಾಗ ಗ್ರಾಮ ಸಡಕ್ ಯೋಜನೆ ಮತ್ತು ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ದೇಶವನ್ನು ಅಭಿವೃದ್ಧಿಗೆ ಕೊಂಡೊಯ್ದಿದ್ದ ಶ್ರೆಯಸ್ಸು ಅವರಿಗೆ ಸಲ್ಲುತ್ತದೆ ಎಂದರು.ಈ ಸಂದರ್ಭದಲ್ಲಿ ರಾಮರಾವ ಜಗತಾಪ, ಬಸವರಾಜ ಬಿಡನಾಳ,ಮಲ್ಲಪ್ಪ ನೋಟಗರ, ಶಿವುಕುಮಾರ ಸಿದ್ನೇಕೋಪ್ಪ, ನಾಗಯ್ಯ ಸಾರಂಗಮಠ, ಸುನಿಲಕುಮಾರ ಮಾಲಗಿತ್ತಿ, ವಸಂತಕುಮಾರ ಮಾಲಗಿತ್ತಿ, ವೀರೆಶ, ಶಿವಯ್ಯ, ಮಲ್ಲಿಕಾರ್ಜುನ್, ಅಪ್ಪಣ, ವೀರೇಶ, ಶಿವಯ್ಯ ಇದ್ದರು.

loading...