ಮಾನವನ ಶರೀರವೇ ದೇಗುಲ: ಚಂದ್ರಶೇಖರ

0
5
loading...

ಕನ್ನಡಮ್ಮ ಸುದ್ದಿ-ಗೋಕಾಕ: ಮಾನವನ ಶರೀರವೇ ಒಂದು ದೇಗುಲ, ಇದರಲ್ಲಿ ತುಂಬಿಕೊಂಡಿರುವವನೇ ಚೈತನ್ಯಸ್ವರೂಪ ಪರಮಾತ್ಮ ,ಅವನ ದರ್ಶನ ಮಾಡಿಸುವುದೇ ಶರಣರ ಸಾಧನೆಯಾಗಿತ್ತು ಎಂದು ಪ್ರೊÃ| ಚಂದ್ರಶೇಖರ ಅಕ್ಕಿ ಹೇಳಿದರು.
ಅವರು ರವಿವಾರದಂದು ಸಂಜೆ ಇಲ್ಲಿಯ ಬಸವ ನಗರದ ಬಲಮುರಿ ಗಜಾನನ ಮಂದಿರದಲ್ಲಿ ಶ್ರಿÃ ಶಿವಯೋಗಿ ತತ್ವ ವಿಚಾರ ವೇದಿಕೆ ಹಾಗೂ ಬಲಮುರಿ ಗಜಾನನ ಟ್ರಸ್ಟ್ ಕಮೀಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡ ಶರಣರ ಚರಿತಾಮೃತಾ ಎಂಬ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬಸವಾದಿ ಶರಣರು ಮಾನವನ ಧಾರ್ಮಿಕ,ಅಧ್ಯಾತ್ಮಿಕ ಬದುಕನ್ನು ಕೇವಲ ಶೃದ್ಧೆ ವಿಶ್ವಾಸಗಳ ಆಧಾರದ ಮೇಲೆ ನಿಲ್ಲಿಸದೇ ಯಾವುದೇ ಮೂರ್ತಿಗಳ ಉಪಾಸಣೆಯತ್ತ ಬೆರಳು ಮಾಡಿ ತೋರಿಸದೇ ಮಾನವನ ಉಗಮಕ್ಕೆ ಮೂಲ ಕಾರಣವಾದ ದೈವಿ ಚೈತನ್ಯಶಕ್ತಿ ತನ್ನಲಿಯೇ ಇದೆ ಎಂದು ಹೇಳಿದ್ದಾರೆ. ಅದಮ್ಯ ಚೈತನ್ಯ ಶಕ್ತಿಯನ್ನು ನಾವು ಬದುಕಿನಲ್ಲಿ ಅರಿತು ಆಚರಣೆಯಲ್ಲಿ ತಂದುಕೊಂಡು ಅನುಭವಿಸುವದೇ ಶರಣರ ಮಾರ್ಗವಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಬಲಮುರಿ ಗಜಾನನ ಟ್ರಸ್ಟ್ ಕಮೀಟಿ ಅಧ್ಯಕ್ಷ ಎಂ.ಪಿ.ಅಂಗಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರವಚನಕಾರ ಡಾ| ಬಸವರಾಜ ಚೌಗಲಾ, ಶ್ರಿÃ ಶಿವಯೋಗಿ ತತ್ವ ವಿಚಾರ ವೇದಿಕೆ ಅಧ್ಯಕ್ಷ ಬಸವರಾಜ ಮುರಗೋಡ, ಉಪಾಧ್ಯಕ್ಷ ವೈ.ಎಚ್.ಕುರುಬಗಟ್ಟಿ ಹಾಗೂ ಪದಾಧಿಕಾರಿಗಳಾದ ನಾಗಪ್ಪ ಚಿಪ್ಪಲಕಟ್ಟಿ, ಮಹಾಂತೇಶ ತಾಂವಶಿ,ವಸಂತರಾವ್ ಕುಲಕರ್ಣಿ, ನೀಲಕಂಠ ತೋಟಗಿ, ರಾಮಜೀ ಜಂಗನವರ, ಶಿವಪ್ಪ ಧರೆಗೌಡರ, ಶಟವೋಜಿ ನಲವಡೆ, ಶಿವಪುತ್ರ ಹೆಗ್ಗಣ್ಣವರ, ಆನಂದ ಮಾಳೋದೆ,ಎಂ.ಬಿ.ಪಾಟೀಲ ಇದ್ದರು.
ಬಿ.ಎ.ಕಮತ ಸ್ವಾಗತಿಸಿದರು. ಸಯ್ಯದ ಬಾಶೀತಅಲಿ ನಿರೂಪಿಸಿದರು. ವಿ.ಜಿ.ಮಿರ್ಜಿ ವಂದಿಸಿದರು.

loading...