ಮಾನವ ದುರಾಸೆಯಿಂದ ಪರಿಸರ ನಾಶ: ಮಹಾಂತೇಶ

0
18
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಮಾನವ ತನ್ನ ದುರಾಸೆಯಿಂದ ಪರಿಸರ ಸಂಪತ್ತು ಹಾನಿಗೊಳಿಸಿದ ಪರಿಣಾಮ ಕರ್ನಾಟಕದ ಕೊಡಗು ಹಾಗೂ ಕೇರಳದ ಕೆಲ ಜಿಲ್ಲೆಗಳು ಎಂದು ಕಂಡರಿಯದ ರೀತಿಯಲ್ಲಿ ಹಾನಿ ಅನುಭವಿಸಿದೆ. ಇದು ಜಗತ್ತಿಗೆ ಒಂದು ಪಾಠವಾಗಿದೆ ಎಂದು ಎಸ್‌ಕೆಡಿಆರ್‌ಡಿಪಿಯ ನರಗುಂದ, ರೋಣ ವಲಯದ ಕೃಷಿ ಅಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು(ಎಸ್‌ಕೆಡಿಆರ್‌ಡಿಪಿ) ಸಮೀಪದ ಜಕ್ಕಲಿ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯ ಕೊಡುಗೆಯಿಂದ ಜಗತ್ತಿನ ಜೀವ ರಾಶಿ ಎಲ್ಲವು ಬಾಳ್ವೆ ಮಾಡುತ್ತಿದೆ. ನಾವು ಭೂಮಿಯ ಹಂಗಿನಲ್ಲಿ ಬದುಕುತ್ತಿರುವ ಸೇವಕರು ಮಾತ್ರ ಆದರೆ ಮಾಲಿಕರಂತೆ ವರ್ತಿಸಿದಾಗ ಹಾಗೂ ಪರಿಸರ ಸಂಪತ್ತು ಹಾಳು ಮಾಡುವ ಪ್ರಮಾಣ ಮಿತಿ ಮೀರಿದಾಗ ಪ್ರಕೃತಿ ವಿಕೋಪಗಳು ಆಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ಗಿಡ ಮರ ನೆಟ್ಟು ಹಸಿರಾಗಿಸುವ ಮೂಲಕ ನೀರಿನ ಹೆಚ್ಚಳ, ತಾಪಮಾನ ಕಡಿತ, ಜೀವ ವೈವಿದ್ಯಗಳ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಮೋಹನ ರಾಥೋಡ್‌ ಮಾತನಾಡಿ, ಮಾನವ ಸಂಕುಲ ಅಭಿವೃದ್ದಿ ಮತ್ತು ಪರಿಸರ ಸಮತೋಲನ ಕಾಪಾಡಲು ಹಸಿರು ಸಂಪತ್ತು ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ ಎಂದರು.
ರೂಪಾ ಹೆಬ್ಬಾಳಲ್ವಿ, ಲಲಿತಾ ರೇಣುಕಾಮಠ, ದೇವಕ್ಕ ಪಲ್ಲೇದ, ಸಂಗಮೇಶ ಮೇಣಸಗಿ, ಮಮತಾಜ ನದಾಫ್‌, ರೇಖಾ ಗಂಗಣವರ ಇದ್ದರು.

loading...