ಮಿತ್ರ ಪಕ್ಷದ ವಿರುದ್ಧ ಕೈ ನಾಯಕರ ಕಿಡಿ ಜೆಡಿಎಸ್ , ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು |

0
26

 

ಜೆಡಿಎಸ್ ಬಿಜೆಪಿಯಲ್ಲಿ ವಿಲೀನಗೊಂಡಿದೆ – ಮಾಜಿ ಸಚಿವ ಇಕ್ಬಾಲ್ ಅನ್ಸಾರಿ

ಕನ್ನಡಮ್ಮ ಸುದ್ದಿ-ಕೊಪ್ಪಳ : ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ, ಜೆಡಿಎಸ್ ಬಿಜೆಪಿ ಪಕ್ಷಗಳು ಯಾವತ್ತಿದ್ರೂ ಕಾಂಗ್ರೆಸ್ ವಿರೋಧಿಗಳು. ಇಲ್ಲಿನ ಜೆಡಿಎಸ್ ಪಕ್ಷ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ವಿಲೀನಗೊಂಡಿದೆ. ತಮ್ಮ ಬೆಂಬಲಿಗರು ನಗರಸಭೆಯಲ್ಲಿ ಆಡಳಿತ ನಡೆಸುತ್ತಿದ್ದ ಹಿಂದಿನ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಹೇಳಿದರು.

ಗಂಗಾವತಿ ನಗರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಬಂದ್ರೆ ದುರಾಡಳಿತ ನಡೆಯುತ್ತೆ. ಬಿಜೆಪಿಯನ್ನು ಗೆಲ್ಲಿಸೋ ಸಲುವಾಗಿ ಜೆಡಿಎಸ್ ಹುಟ್ಟಿಕೊಂಡಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಹಾಗೂ ಮಾಜಿ ಸಂಸದ ಶಿವರಾಮಗೌಡ ಅವರು ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಅನ್ಸಾರಿಯವರ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೆÃಶಿಸಿ ಅವರು ಗಂಗಾವತಿಯಲ್ಲಿರುವ ಜೆಡಿಎಸ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಿದೆ ಇಲ್ಲಿರುವುದು ನಿಜವಾದ ಜೆಡಿಎಸ್ ಪಕ್ಷ ಅಲ್ಲ.ಈ ಎರಡೂ ಪಕ್ಷಗಳಿಂದ ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿ ಕನಸಿನ ಮಾತು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಖಡಕಾಗಿ ಹೇಳಿದ್ದಾರೆ.

ಸಭೆಯಲ್ಲಿ ಪಕ್ಷದ ಮುಖಂಡರಾದ ಬಸವರಾಜ ಸ್ವಾಮಿ ಮಳೇಮಠ,ರುದ್ರಶ ಡ್ಯಾಗಿ,ಬಸವರಾಜ ರಾಮತ್ನಾಳ್,ರಾಜು ನಾಯಕ,ನವಾಬ್ ಸಾಬ್,ಶರಣೇಗೌಡ,ನಾಗರಾಜ ನಂದಾಪೂರ,ಅಂಬಣ್ಣ,ಮಲ್ಲೆÃಶಪ್ಪ,ಮಹೇಶ ಸಾಗರ್, ಗದ್ವಾಲ್ ಖಾಸೀಮ್ ಸಾಬ್,ರಾಮಣ್ಣ ಬಳ್ಳಾರಿ,ಅಮರಜ್ಯೊÃತಿ ನರಸಪ್ಪ,ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್,ನಗರ ಸಭೆ ಮಾಜಿ ಸದಸ್ಯರಾದ ಈ.ರಾಮಕೃಷ್ಣ,ಮನೋಹರಸ್ವಾಮಿ ಹಿರೇಮಠ,ರಾಜು ಬಿ.ಲಿಂಗರಾಜ,ಹುಸೇನ ಪೀರ ಅನೇಕರಿದ್ದರು.

ಚುನಾವಣೆಯಲ್ಲಿ ಸ್ವತಃ ತಾವು ಬೀದಿಗಳಿದು ಹಿಂದಿನ ಆಡಳಿತ ಮತ್ತು ತಾವು ಶಾಸಕರಿದ್ದ ಅವಧಿಯಲ್ಲಾ ನಾನಾ ಅಭಿವೃದ್ಧಿ ಕೆಲಸಗಳನ್ನು ಮತದಾರರಿಗೆ ಮನವರಿಕೆ ಮಾಡುವ ಮೂಲಕ ೩೦ ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ನಗರ ಸಭೆ ಕಛೇರಿ ಮೇಲೆ ಮತ್ತೆ ಕಾಂಗ್ರೆಸ್ ಭಾವುಟ ಹಾರಿಸುತ್ತೆÃನೆ – ಇಕ್ಬಾಲ್ ಅನ್ಸಾರಿ, ಮಾಜಿ ಸಚಿವ ಗಂಗಾವತಿ

ಜೆಡಿಎಸ್, ಬಿಜೆಪಿ ಮುಖಂಡರು ಒಂದೇ: ಗಂಗಾವತಿಯಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಇವುಗಳಿಂದ ಅಭಿವೃದ್ಧಿ ಕಾಣಲು ಅಸಾಧ್ಯ. ತಮ್ಮ ಅಲಕ್ಷತನದಿಂದ ಕಳೆದ ಗಂಗಾವತಿ ವಿಧಾನ ಸಭಾ ಕ್ಷೆÃತ್ರದ ಬಿಜೆಪಿ ಟಿಕೆಟ್ ತಪ್ಪಿಸಿಕೊಂಡು ಸಾಕಷ್ಟು ಅನುಭವ ಪಟ್ಟಿರುವೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದವರನ್ನು ನಗರ ಸಭೆಯಲ್ಲಿ ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರು ಪಣ ತೊಡಬೇಕು – ಮಾಜಿ ಸಂಸದ ಶಿವರಾಮಗೌಡ

 

loading...