ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಂಗ್ರಹಣೆ

0
16
loading...

ಕನ್ನಡಮ್ಮ ಸುದ್ದಿ-ಬಾಗಲಕೋಟ : ನಗರದ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್‌ ಘಟಕದ ವತಿಯಿಂದ ಹಮ್ಮಿಕೊಂಡ ಸದ್ಬಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಡಗು ಮತ್ತು ನೆರೆಯ ಕೇರಳ ರಾಜ್ಯದಲ್ಲಿ ಮಳೆಯ ಪ್ರವಾಹದಿಂದ ಸಿಲುಕಿ ಸಂತ್ರಸ್ತರಾದವರಿಗೆ ಕಾಲೇಜ್‌ ವತಿಯಿಂದ ಹಣ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿ ಕೊಡಲಾಯಿತು. ಈ ಕುರಿತು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಎ.ಬೆನಕನಾಳ ಮಾತನಾಡಿ ಮಾನವೀಯ ದೃಷ್ಠಿಯಿಂದ ಹಾಗೂ ಉದಾರ ಮನಸ್ಸಿನಿಂದ ಸಂಕಷ್ಟದಲ್ಲಿರುವವರಿಗೆ ಧನ ಸಹಾಯ ಮಾಡುವ ಕಾರ್ಯ ಶ್ಲಾಘನೀಯವಾಗಿದ್ದು, ಸಹಾಯ ಮಾಡುವದರಿಂದ ಪರಸ್ಪರರಲ್ಲಿ ಭಾವೈಕ್ಯತೆ ಮೂಡಿಸಿ ಮತ್ತಷ್ಟು ಸಂಬಂಧ ಗಟ್ಟಿಗೊಳಿಸಲು ಸಾಧ್ಯವೆಂದರು.
ಇದೇ ಸಂದರ್ಭದಲ್ಲಿ ಡಾ.ಬಿ.ಆರ್‌.ಪಾಟೀಲ, ಎನ್‌ಎಸ್‌ಎಸ್‌ ಅಧಿಕಾರಿ ಭೂಮಣ್ಣವರ, ಉಪನ್ಯಾಸಕ ರಮೇಶ ಯಾನಮಶೆಟ್ಟಿ, ಎನ್‌ಎಸ್‌ಎಸ್‌ ಲೀಡರ ಶರಣಬಸಪ್ಪ ಬೋವಿ, ವಿದ್ಯಾರ್ಥಿ ಪ್ರತಿನಿಧಿ ಯಲ್ಲಪ್ಪ ಗುದರಿ ಸೇರಿದಂತೆ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಇದ್ದರು.

loading...