ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿ ಮನವಿ

0
4
loading...

ಕನ್ನಡಮ್ಮ ಸುದ್ದಿ-ಧಾರವಾಡ: ತಾಲೂಕು ಮುಗಳಿ ಗ್ರಾಮದ ಶತಮಾನ ಕಂಡ ಶಾಲೆಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್.ಕೆ.ಎಸ್) ಹಾಗೂ ಮುಗಳಿ ಗ್ರಾಮಸ್ಥರ ಹೋರಾಟ ಸಮಿತಿಗಳು ಶಹರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸರ್ಕಾರ ಶತಮಾನ ಕಂಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುತ್ತಿದೆಯಾದರೂ, ಈ ಶಾಲೆಗೆ ಮಾತ್ರ ಅದರ ಪ್ರಯೋಜನ ತಲುಪದಿರುವುದು ಅತ್ಯಂತ ಖೇಧಕರ. ಈ ಶಾಲೆ ಯಾವುದೇ ಮೂಲ ಸೌಲಭ್ಯಗಳಿಲ್ಲದೇ ಬಳಲುತ್ತಿದೆ. ಶಾಲೆಯ ಕಟ್ಟಡವಿರುವ ಸ್ಥಳವು ಇನ್ನೂ ಶಾಲೆಯ/ಇಲಾಖೆಯ ಹೆಸರಿಗೆ ನೊಂದಣಿಯಾಗಿರುವುದಿಲ್ಲ. ಶಾಲೆಯಲ್ಲಿ ಸುಮಾರು 180 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು ಮಕ್ಕಳು ಭಯದ ವಾತಾವರಣದಲ್ಲಿ ಕಲಿಯುವಂತಾಗಿದೆ. ಇದರಿಂದ ಹಲವಾರು ತರಗತಿಗಳನ್ನು ಬಯಲಿನಲ್ಲಿ ನಡೆಸಲಾಗುತ್ತಿದೆ.
ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲವಾಗಿದೆ. ಸರಿಯಾದ ಶೌಚಾಲಯಗಳಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಶಾಲೆಯ ಸುತ್ತಲೂ ಕಂಪೌಂಡ್ ವ್ಯವಸ್ಥೆ ಇಲ್ಲದಿರುವುದರಿಂದ ಶಾಲೆಗೆ ಭದ್ರತೆಯಿಲ್ಲದಂತಾಗಿದೆ. ಹಾಗೆಯೇ ಅತೀ ಮುಖ್ಯವಾಗಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ಕೊರತೆಯಿದೆ. ಇಂತಹ ಶಾಲೆಗಳ ಅಭಿವೃದ್ಧಿಗೆ ಯಾರೂ ಸರಿಯಾಗಿ ಸ್ಪಂದಿಸದೇ ಇರುವುದು ಅತ್ಯಂತ ಬೇಸರದ ವಿಷಯವಾಗಿದೆ ಇದನ್ನು ತೀವ್ರವಾಗಿ ಖಂಡಿಸಿವೆ. ಈ ಕೂಡಲೇ ಮುಗಳಿ ಗ್ರಾಮದ ಶತಮಾನ ಕಂಡ ಶಾಲೆಯ/ಇಲಾಖೆಯ ಹೆಸರಿಗೆ ಶಾಲೆಯ ಜಮೀನನ್ನು ನೊಂದಾಯಿಸಿ ಕೊಡಬೇಕು. ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಅಗತ್ಯವಿರುವಷ್ಟು ಕಟ್ಟಡಗಳನ್ನು ಒದಗಿಸಬೇಕು. ಶಾಲೆಗೆ ಶೌಚಾಲಯವನ್ನು ಒದಗಿಸಬೇಕು. ಶಾಲೆಗೆ ಶುದ್ದ ಕುಡಿಯುವ ನೀರನ್ನು ಒದಗಿಸಬೇಕು. ಶಾಲೆಗೆ ಅಗತ್ಯವಿರುವಷ್ಟು ಶಿಕ್ಷಕರನ್ನು ಒದಗಿಸಬೇಕು ಮತ್ತು ಶಾಲೆಯು ಪ್ರಸ್ತುತ 8ನೇ ತರಗತಿಯವರೆಗೆ ಇದ್ದು ಅದನ್ನು 10ನೇ ತರಗತಿಯವರೆಗೆ ವಿಸ್ತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಆರ್.ಕೆ.ಎಸ್. ರೈತ ಸಂಘಟನೆಯ ಜಿಲ್ಲಾ ಮುಖಂಡ ಲಕ್ಷ್ಮಣ ಗಡಗನ್ನವರ, ಶರಣು ಗೋನವಾರ, ಮಂಜುನಾಥ ಜೋಡಳ್ಳಿ, ಮಡಿವಾಳಪ್ಪ ಕಮ್ಮಾರ, ಕಂಡೋಜಿ ಕಾಟಕರ್, ಆತ್ಮಾನಂದ ಕಡ್ಲೇಸ್ಕರ್, ಜಗದೀಶ ಗಣಮನ್ನವರ್, ರವಿ ಟಕ್ಕಪ್ಪನವರ್, ಬಸಪ್ಪ ಧಾರವಾಡ, ಗಂಗಾಧರ ಭಾಗವಹಿಸಿದ್ದರು.

loading...