ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿ ಹುಳುವಿನ ನಿರ್ವಹಣಾ ಕ್ರಮಗಳು

0
17

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಬಾಗಲಕೋಟ ಜಿಲ್ಲೆಯ ಮೆಕ್ಕೆಜೋಳ ಬೆಳೆಯು ಪ್ರದೇಶದ ಅಲ್ಲಲ್ಲಿ ಬೆಳೆಗೆ ಸೈನಿಕ ಹುಳುವಿನ (ಈಚಿಟಟ ಂಡಿmಥಿತಿoಡಿm) ಹೊಸ ಪ್ರಬೇಧ ಸ್ಪೋಡೋಪ್ಟೇರಾ ಪ್ರ್ಯೂಜಿಫರ್ಧಾ (Sಠಿoಜoಠಿಣeಡಿ ಜಿಡಿugiಠಿeಡಿಜಚಿ) ಕಾಣಿಸಿಕೊಂಡು ಅಲ್ಪ ಸಮಯದಲ್ಲಿ ಹೆಚ್ಚು ಆಹಾರವನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ಲದ್ದಿಯನ್ನು ಸುಳಿಗಳಲ್ಲಿ ಹಾಕುವುದರಿಂದ ಸ್ಥಳೀಯವಾಗಿ ಇದನ್ನು ಲದ್ದಿ ಹುಳು ಎಂತಲೂ ಕರೆಯುತ್ತಾರೆ.
ಹಾನಿಯ ಲಕ್ಷಣಗಳು: ಮೊಟ್ಟೆಯಿಂದ ಬಂದ ಮರಿಗಳು ಗುಂಪಿನಲ್ಲಿದ್ದು ಮೊದಲು ಮೊಟ್ಟೆಯ ಸಿಪ್ಪೆಯನ್ನೆ ತಿಂದು ಬದುಕುವುದು. ತದನಂತರ ಗೋವಿನ ಜೋಳದ ಸುಳಿಯಲ್ಲಿ ಉಳಿದುಕೊಂಡು ಸಸ್ಯಗಳ ಹರಿತ್ತನ್ನು ಕೆರೆದು ತಿಂದು ಬದುಕುತ್ತವೆ. ಇಂತಹ ಎಲೆಗಳು ಜಾಳು ಜಾಳಾಗಿದ್ದು ಅಸ್ಥಿಪಂಜರದಂತೆ ಗೊಚರಿಸಿ, ಎಲೆಗಳಲ್ಲಿ ದೊಡ್ಡ ದೊಡ್ಡ ಹಾಗೂ ಸಾಲಿನಲ್ಲಿರುವ ಕಿಡಕಿಗಳನ್ನು ಅಥವಾ ರಂಧ್ರಗಳನ್ನು ಕೊರೆಯುತ್ತದೆ. ಗೋವಿನ ಜೋಳದ ಬೆಳೆಯಲ್ಲಿ ಸಮಾನಾಂತರವಾಗಿ ಈ ರೀತಿಯ ರಂಧ್ರಗಳನ್ನು ಗಮನಿಸಿದರೆ ಆಕ್ರಮಣಕಾರಿ ಕೀಟವು ಒಳಗಡೆ ಇದೆ ಎಂದು ಭಾವಿಸಬೇಕು. ಕೀಟದ ಬಾಧೆಯು ತೀವೃವಾದಲ್ಲಿ ಬೆಳೆಯುತ್ತಿರುವ ಸುಳಿಯನ್ನೇ ತಿಂದು ಹಾಕಿ ಬೆಳಗೆ ತೀವೃ ಹಾನಿ ಉಂಟು ಮಾಡಬಲ್ಲದು ಅಥವಾ ಸಸ್ಯವು ಸತ್ತು ಹೋಗುವುದು. ಕೀಡೆಗಳು ಬೆಳೆದಂತೆ ಹಾನಿಯ ಮಟ್ಟ ತೀವೃವಾಗುತ್ತದೆ. ಬೆಳೆದ ಕೀಡೆಗಳು ಒಂದನ್ನೊಂದು ತಿಂದು ಕೀಟಭಕ್ಷಕ ಪ್ರವೃತ್ತಿಯನ್ನು ತೋರುತ್ತವೆ. ಕೀಡೆಗಳು 6 ಹಂತಗಳನ್ನು ಸುಮಾರು 2 ರಿಂದ 3 ವಾರಗಳಲ್ಲಿ ಅಂದರೆ 14 ರಿಂದ 21 ದಿನಗಳಲ್ಲಿ ಪೂರೈಸಬಲ್ಲವು. ನಿರಂತರವಾಗಿ ಆಹಾರ ಭಕ್ಷಿಸುವ ಬೆಳೆಯ ಕೀಡೆಗಳು ತಾವು ತಿನ್ನುವ ಆಹಾರವು ಖಾಲಿಯಾದ ತಕ್ಷಣ ಆಹಾರ ಅನ್ವೇಷಣೆಯಲ್ಲಿ ಒಂದು ಹೊಲದಿಂದ ಅಥವಾ ಗದ್ದೆಯಿಂದ ಮತ್ತೊಂದು ಗದ್ದೆಗೆ ಸೈನಿಕೋಪಾದಿಯಲ್ಲಿ ಪಸರಿಸುವ ಶಕ್ತಿಯನ್ನು ಹೊಂದಿದೆ.
ವಿಷಪಾಷಾಣ ತಯಾರಿಸುವ ವಿಧಾನ: 2 ಕಿ.ಜಿ. ಬೆಲ್ಲ + 250 ಮಿ.ಲೀ.ಮೋನೊಕ್ರೋಟೊಫಾಸ್‌ 36% ಎಸ್‌.ಎಲ್‌. (ಒoಟಿoಛಿಡಿoಣoಠಿhos) + 20 ಕಿ.ಜಿ. ಭತ್ತ ಅಥವಾ ಗೋಧಿ ಥೌಡು ತಕ್ಕ ಮಟ್ಟಿಗೆ ನೀರನ್ನು ಬೆರೆಸಿ ರಾತ್ರಿಯಿಡಿ ಕಳೆಯಲು ಬಿಡಬೇಕು. ಅಥವಾ 2 ಕಿ.ಜಿ. ಬೆಲ್ಲ + 20 ಕಿ.ಜಿ. ಭತ್ತ ಅಥವಾ ಗೋಧಿ ಥೌಡು ತಕ್ಕ ಮಟ್ಟಿಗೆ ನೀರನ್ನು ಬೆರೆಸಿ ರಾತ್ರಿಯುಡು ಕಳೆಯಲು ಬಿಟ್ಟು ಮಾರನೇ ದಿನ 200 ಗ್ರಾಂ ಥೈಯೋಡಿಕಾರ್ಬ (ಖಿhioಜiಛಿಚಿಡಿb) ಕೀಟನಾಶಕ ಮಿಶ್ರಣ ಮಾಡಿ ಸಾಯಂಕಾಲ ಬೆಳೆಯ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು.
ಕೀಡೆಗಳು ವಿಷಪಾಷಾಣಕ್ಕೆ ಬೇಗನೆ ಆಕರ್ಷಿತಗೊಂಡು ತಿನ್ನುವುದರಿಂದ ಬಹು ಬೇಗನೆ ಹತೋಟಿ ಸಾಧ್ಯವಾಗುತ್ತದೆ. ಬೆಳೆ ದಟ್ಟವಾಗಿದ್ದಲ್ಲಿ ಎರಡು ಸಾಲಿಗೊಂದರಂತೆ ಎರಡು ಮೀಟರ್‌ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಹೊಲದಲ್ಲಿ ಇಟ್ಟು ಕೀಡೆಗಳನ್ನು ಆಕರ್ಷಿಸಿ ನಾಶ ಮಾಡಬಹುದು. ಕೀಟಬಾಧೆ ಕಂಡ ತಕ್ಷಣ ತುರ್ತಾಗಿ ಹಾಗೂ ಸಾಮೂಹಿಕವಾಗಿ ರೈತ ಬಾಂಧವರು ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ / ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಸಂಪರ್ಕಿಸುವಂತೆ ಜಿಲ್ಲಾ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...