ಮೆಕ್ಸಿಕೋದಲ್ಲಿ ನೆಲಕ್ಕಪ್ಪಳಿಸಿದ ವಿಮಾನ

0
23
loading...

ಮೆಕ್ಸಿಕೋ: ಮೆಕ್ಸಿಕೋದ ರಾಜಧಾನಿ ಡುರಾಗೊಂ ವಿಮಾನ ನಿಲ್ದಾಣದಿಂದ 100 ಪ್ರಯಾಣಿಕರಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿದ್ದು ಅದೃಷ್ಟವಶಾತ್ ಎಲ್ಲರು ಬದುಕುಳಿದಿದ್ದಾರೆ. 

ಮೂವರು ವಿಮಾನ ಸಿಬ್ಬಂದಿ ಹಾಗೂ 97 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವಿಮಾನ ಹವಾಮಾನ ವ್ಯಪರಿತ್ಯದಿಂದ ನೆಲಕ್ಕಪ್ಪಳಿಸಿದೆ ಎನ್ನಲಾಗಿದೆ. ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲಿ ವಿಮಾನ ನೆಲಕ್ಕಪ್ಪಳಿಸಿದ್ದು 85 ಮಂದಿ ಗಾಯಗೊಂಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ. 

ಮಳೆ ಹಾಗೂ ಸಿಡಿಲಿನಿಂದ ವಿಮಾನಯಾನಕ್ಕೆ ಅಡ್ಡಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. 

loading...