ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರ ಬಿಗ್ ಶಾಕ್

0
59
loading...

ಬೆಂಗಳೂರು:ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್‍ನ ಕೆಲ ಶಾಸಕರು ಬಿಗ್ ಶಾಕ್ ಕೊಟ್ಟಿದ್ದಾರೆ.
ಶೀಘ್ರವಾಗಿ ಸಂಪುಟ ವಿಸ್ತರಣೆಗೆ ಬಿಗಿಪಟ್ಟು ಹಿಡಿದಿದ್ದು,ಸಂಪುಟದಲ್ಲಿ ಸ್ಥಾನ ಕೊಡಿ ಇಲ್ಲದಿದ್ದರೆ ಬಿಜೆಪಿ ಕಡೆ ನಮ್ಮ ನಡೆ ಎಂದು ಶಾಸಕರು ಹೇಳುತ್ತಿದ್ದಾರೆ.
ಕಾಂಗ್ರೆಸ್‍ನಿಂದ 10ರಿಂದ 12ಶಾಸಕರು ಬಿಜೆಪಿಗೆ ಹೋಗು ಬೆದರಿಕೆ ಒಡ್ಡುತ್ತಿದ್ದಾರೆ.ಈಗಾಗಲೇ ಸಚಿವ ಸಂಪುಟ ರಚನೆಯಾಗಿದ್ದು, 6ಸ್ಥಾನಗಳು ಮಾತ್ರ ಉಳಿದಿದ್ದು,ಆ ಸ್ಥಾನಗಳನ್ನು ಯಾರಿಗೆ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ.
ಕೆಲ ಕಾಂಗ್ರೆಸ್ ಶಾಸಕರು ನೀಡಿದ ಶಾಕ್‍ಗೆ ಕಾಂಗ್ರೆಸ್‍ನಲ್ಲಿ ಆತಂಕ ಶುರುವಾಗಿದೆ.ಇದರಿಂದ ಅತೃಪ್ತರನ್ನು ಸೆಳೆದು ಆಪರೇಷನ್ ಕಮಲ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ನಮಗೂ ಗೊತ್ತಿದೆ ಯಾರು ಏನೇನು ಪ್ರಯತ್ನ ಮಾಡುತ್ತಿದ್ದಾರೆ. ಕೆಲವರಿಗೆ ಕೆಲಸವಿಲ್ಲದೆ ನಮ್ಮವರ ಬಳಿ ಬಂದು ಆಮಿಷ ಒಡ್ಡಿ ಮಾತನಾಡುತ್ತಿದ್ದಾರೆ.ಆದರೆ ನಾವು ಈಗ ಅದರ ಬಗ್ಗೆ ಮಾತನಾ ಡುವುದಿಲ್ಲ.ಸೂಕ್ತ ಸಮಯ ಸಂದರ್ಭದಲ್ಲಿ ಮಾತನಾಡುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

loading...