ಮೈತ್ರಿ ಸರ್ಕಾರ ಆಡಳಿತ ಐದು ವರ್ಷ ಭದ್ರ : ಶಾಸಕ ಸತೀಶ ಜಾರಕಿಹೊಳಿ

0
23
loading...

ಮೈತ್ರಿ ಸರ್ಕಾರ ಆಡಳಿತ ಐದು ವರ್ಷ ಭದ್ರ : ಶಾಸಕ ಸತೀಶ ಜಾರಕಿಹೊಳಿ

ಕನ್ನಡಮ್ಮ ಸುದ್ದಿ- ಬೆಳಗಾವಿ: ರಾಜ್ಯದಲ್ಲಿ‌ ಇರುವ ಮೈತ್ರಿ ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ. ಯಾವುದೇ ಸಂಶಯವಿಲ್ಲವೆಂದು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ‌ ಸಲಹಾ ಸಮಿತಿ ಸಭೆಯ ನಂತರ ಮಾಧ್ಯಮರೊಂದಿಗೆ ಮಾತನಾಡಿ, ಸಂಸದ ಸುರೇಶ ಅಂಗಡಿಯವರು ಹದಿನೈದು ದಿನಗಳಲ್ಲಿ ಮೈತ್ರಿ ಸರ್ಕಾರ ಉರುಳುತ್ತದೆ ಎಂದು ಹೇಳಿದ ಮಾತಿಗೆ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರ  ಐದು ವರ್ಷ ಪೂರ್ಣ  ಆಡಳಿತ ನಡೆಸುತ್ತದೆ.ಇದರ ಬಗ್ಗೆ ಯಾವುದೇ ಸಂದೇಹವಿಲ್ಲವೆಂದು ಭರವಸೆ ಮಾತುಗಳನ್ನಾಡಿದರು.

ಅಲ್ಲದೆ ರಾಜಕೀಯದಲ್ಲಿ ವಿರೋಧಿಗಳು ಸಾಮಾನ್ಯ ಆದರೆ ರಾಜಕಾರಣಿ ಗಳು ಎಚ್ಚರದಿಂದ ಇರಬೇಕಾಗುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ‌ ಸಿಗಬಾರದೆಂದು ದುಷ್ಠ ಶಕ್ತಿಗಳು ಒಂದಾಗಿ‌ ಸಿಎಂ ಸ್ಥಾನ ಸಿಗದಂತೆ ಮಾಡಿರಬಹುದು. ಆದರೆ‌ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾದ 125 ಸ್ಥಾನಗಳು ಬಂದಿದ್ರೆ.ಅವರೇ ಸಿಎಂ ಆಗುತ್ತಿದ್ದರು ಎಂದು ಹೇಳಿದರು.

loading...