ಮೈಸೂರು ಕ್ಷೇತ್ರದಿಂದ ನಟ ಅಂಬರೀಶ್ ಸ್ಪರ್ಧೆ?

0
14
loading...

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದ ಮಾಜಿ ಸಚಿವ ಅಂಬರೀಶ್ ಅವರನ್ನು ಲೋಕಸಭೆ ಚುನಾವಣೆ ಉದ್ದೇಶದಿಂದ ಮೈಸೂರು ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕಾಂಗ್ರೆಸ್‍ನ ಕೆಲ ನಾಯಕರು ಲೆಕ್ಕಚಾರ ಹಾಕಿದ್ದಾರೆ.
ಈಗಾಗಲೇ ಅಂಬರೀಶ್ ಅವರು ಈ ಕುರಿತು ತಮ್ಮ ಆಪ್ತರ ಬಳಿ ಚರ್ಚೆಸಿದ್ದಾರೆನ್ನಲಾಗಿದ್ದು,ಅಂದುಕೊಂಡಂತೆ ಆದರೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಅಂಬರೀಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿಯೊಂದು ಕೇಳಿ ಬರುತ್ತಿದೆ.
ಇನ್ನು ಜೆಡಿಎಸ್ ನಾಯಕರು ಕೂಡ ಅಂಬರೀಶ್‍ಗೆ ಮಂಡ್ಯ ಲೋಕಸಭಾ ಮತಕ್ಷೇತ್ರದ ಟಿಕೆಟ್ ನೀಡುವ ಲೆಕ್ಕಚಾರ ಹಾಕುತ್ತಿದ್ದೆ ಎಂದು ಹೇಳಲಾಗಿದ್ದು, ಒಂದು ವೇಳೆ ಅಂಬರೀಶ್ ಜೆಡಿಎಸ್ ಸೇರ್ಪಡೆಯಾದರೆ ಮಂಡ್ಯ ಕ್ಷೇತ್ರದಿಂದ ಅವರ ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ.
ಅಂಬರೀಶ್ ಕಳೆದ ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಗೂ ಮೌನವಾಗಿಯೇ ಉಳಿಯುತ್ತಾರೆಯೇ ಅಥವಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ಕಾದು ನೋಡಬೇಕು.

loading...