ಮೌಲ್ಯಧಾರಿತವಾಗಿ ಬದುಕಲು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಶಂಕರ

0
5
loading...

ಕನ್ನಡಮ್ಮ ಸುದ್ದಿ-ಧಾರವಾಡ: ವಿಶಿಷ್ಟಚೇತನ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು ಅವರು ಸಮಾಜಕ್ಕೆ ಹೊರೆ ಅಲ್ಲ ಈ ಭಾರಿಯ ಬಸವ ಪಂಚಮಿ ವೈಶಿಷ್ಟ್ಯತೆಯಿಂದ ಕೂಡಿದ್ದು ನನಗೆ ಸಂತೃಪ್ತಿಯಾಯಿತು ಇಂತಹ ವಿಶೇಷ ಮಕ್ಕಳಿಗೆ ಅನುಕಂಪ ಅವಕಾಶವನ್ನು ನೀಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಕೆ.ಎಂ. ಎಪ್. ಅಧ್ಯಕ್ಷ ಶಂಕರ ಮುಗದ ಹೇಳಿದರು.
ಸಪ್ತಾಪೂರ ನಂ.12 ಶಾಲೆಯಲ್ಲಿ ಬಸವ ಕೇಂದ್ರ ಕ್ಷೇತ್ರ, ಧಾರವಾಡ ಹಾಲು ಒಕ್ಕೂಟ, ಸಂಪನ್ಮೂಲ ಕೇಂದ್ರ ಹಾಗೂ ಜನಮುಖಿ ಸಂಸ್ಥೆ ಸಹಯೋಗದೊಂದಿಗೆ ವಿಕಲಚೇತನ ಮಕ್ಕಳಿಗೆ ಹಾಲು ಕುಡಿಸಿ, ಉಂಡಿ ತಿನ್ನಿಸುವುದರ ಮೂಲಕ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದರು. ಬಸವ ಕೇಂದ್ರದ ಅಧ್ಯಕ್ಷ ಶಿವಣ್ಣ ಶರಣ್ಣವರ ಅಧ್ಯಕ್ಷತೆವಹಿಸಿ ಮಾತನಾಡಿ, ಮೌಲ್ಯಧಾರಿತವಾಗಿ ಬದುಕಲು ಉತ್ತಮ ಸಂಸ್ಕಾರ ನೀಡಿ ಬಸವಣ್ಣನವರ ಆಶಯದಂತೆ ಬಡವರಿಗೆ ದಿವ್ಯಾಂಗಿಗಳಿಗೆ ಸಹಾಯ ಸಹಕಾರ ನೀಡಿರಿ. ಕಲ್ಲು ನಾಗರಕ್ಕೆ ಹಾಲು ಹಾಕಿ ನಿರರ್ಥಕ ಮಾಡಬೇಡಿರಿ ಅದನ್ನು ಮಕ್ಕಳಿಗೆ ನೀಡಿ ನಿಮ್ಮ ಜೀವನ ಪಾವನ ಮಾಡಿಕೊಳ್ಳಿರಿ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾತನಾಡಿ, ಶಿಕ್ಷಣ ಸಾರ್ವತ್ರಿಕರಣದಲ್ಲಿ ಬಸವಕೇಂದ್ರವರು ಕೈಜೋಡಿಸಿ ಸಹಕರಿಸಬೇಕು ಅಂಕಾಧಾರೀತವಾಗಿ ಮಕ್ಕಳನ್ನು ಬೆಳೆಸದೇ ಮೌಲ್ಯಾಧಾರಿತವಾಗಿ ಬೆಳಸಲು ಮುಂದಾಗಬೇಕು, ಮಕ್ಕಳಿಗೆ ಬಸವಕೇಂದ್ರದಿಂದ ನೋಟಬುಕ್, ಕಲರಬಾಕ್ಸ್, ಮತ್ತು ಇತರೆ ಸಾಮಗ್ರಿಗಳನ್ನು ವಿತರಿಸುವದರೊಂದಿಗೆ ಮಕ್ಕಳ ಮನಸಲ್ಲಿ ಅಚ್ಚಾಗಿ ಉಳಿಯುವ ಕಾರ್ಯವನ್ನು ಮಾಡಬೇಕು ಎಂದರು. ನಮ್ಮ ಇಲಾಖೆಯೊಂದಿಗೆ ನನಗೂ ಶಾಲೆ ಒಪ್ಪದದಿಂದ ಸಫ್ತಾಪೂರ ಎಸ್.ಆರ್.ಪಿಯು ಉತ್ತಮ ಪ್ರಗತಿಯಲ್ಲಿ ನಡೆಯುತ್ತಿರುವದಕ್ಕೆ ಬಸವರಾಜ ಮ್ಯಾಗೇರಿ ಹಾಗೂ ಎಲ್ಲ ಬಿ.ಈ.ಐ.ಈ.ಆರ್.ಟಿ ಸಹಾಯದಿಂದ ಪ್ರತಿ ದಿನವು ಮಕ್ಕಳು ಮತ್ತು ಪಾಲಕರು ಬಂದು ಸಮನ್ವಯ ಶಿಕ್ಷಣ ಪಡೆದು ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಇದೇ ರೀತಿ ಎಲ್ಲ ಮಕ್ಕಳು ಸಮನ್ವಯ ಶಿಕ್ಷಣ ಪಡೆದು ಮಖ್ಯವಾಹಿನಿಗೆ ಬರುವಂತಾಗಬೇಕು ಎಂದರು.ಎಂ.ಎಸ್. ಚೌಧರಿ ಪ್ರಾಸ್ತಾವಿಕ ಮಾತನಾಡಿ, ಹಾಲು ಅಮೂಲ್ಯ ಸಂಪೂರ್ಣ ಆಹಾರ ಅದನ್ನು ಮಣ್ಣಿನಲ್ಲಿ ಹಾಕಿ ಕೆಡಿಸದೆ ಅದನ್ನು ಅಗತ್ಯವಿದ್ದ ಮಕ್ಕಳಿಗೆ ನೀಡಿ ಅವರ ಆರೋಗ್ಯ ಸುಧಾರಿಸಲು ಸಹಕರಿಸಿರಿ. ವೈಜ್ಞಾನಿಕವಾಗಿ ಚಿಂತಿಸಿ ಹಾಗೂ ಸಮಾಜದ ಸ್ವಸ್ಥತೆ ಕಾಪಾಡಲು ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.
ರಾಮಚಂದ್ರ ಧೋಂಗಡೆ, ಶಿವಶರಣ ಕಲಭಶೆಟ್ಟರ, ತಿಪ್ಪಣ್ಣ ಮ್ಯಾಗೇರಿ, ಚನ್ನಪ್ಪ ಬಂಡಿ, ಸವಿತಾ ನಡಕಟ್ಟಿ, ಬಸಂತಿ ಹಪ್ಪಳದ, ಅಶೋಕ ಸಿಂಧಗಿ, ಪ್ರಭಾರಿ ಬಿ.ಆರ್.ಸಿ. ಅಶೋಕ ಡೊಂಬರಕೊಪ್ಪ ಪ್ರಧಾನ ಗುರುಮಾತೆ ಜಯಶ್ರೀ ಮುದಿಗೌಡ್ರ, ಸುಮಿತಾ ಹಿರೇಮಠ, ಉಮೇಶ ಕಟಗಿ ಉಪಸ್ಥಿತರಿದ್ದರು. ಜನಮುಖಿ ಸಂಸ್ಥೆಯ ಬಸವರಾಜ ಮ್ಯಾಗೇರಿ ವಂದಿಸಿದರು, ವಿ.ಎನ್.ಕೀರ್ತಿವತಿ ನಿರೂಪಿಸಿದರು.

loading...