ಮೌಲ್ಯವರ್ಧಿತ ಉತ್ಪನ್ನ ಮಾರಾಟ ಮಾಡಿ ಯಶಸ್ವಿಯಾಗಿರಿ

0
5
loading...

ಕನ್ನಡಮ್ಮ ಸುದ್ದಿ-ಧಾರವಾಡ: ಸಿರಿಧಾನ್ಯ ಬೆಳೆಯ ಮಹತ್ವ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸತತವಾಗಿ ಲಭ್ಯವಿರುವಂತೆ ವಿಜ್ಞಾನಿಗಳು ಶ್ರಮಿಸಬೇಕು ಎಂದು ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಪುಷ್ಪಾ ಖಾದಿ ಹೇಳಿದರು.
ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಿಂದ ಔದ್ಯೋಗಿಕರಣಕ್ಕಾಗಿ ಮಹಿಳೆಯರಿಗೆ ಸಿರಿಧಾನ್ಯಗಳ ಹಪ್ಪಳ ತಯಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಟುಂಬದ ಆರೋಗ್ಯ ಚುಕ್ಕಾಣಿಯು ಮಹಿಳೆಯ ಮೇಲೆ ನಿಂತಿದೆ. ಆದ್ದರಿಂದ ಮಹಿಳೆ ಮನೆಯ ಜವಾಬ್ದಾರಿಯ ಜೊತೆಗೆ ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಿರಿಧಾನ್ಯಗಳ ಬಳಕೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಾಡಿ ಯಶಸ್ವಿ ಉದ್ದಿಮೆದಾರರಾಗಬೇಕು ಎಂದರು. ಕೃಷಿ ವಿಶ್ವವಿದ್ಯಾಲಯದ ವಿಸûರಣಾ ನಿರ್ದೇಶಕ ಡಾ. ಆರ್. ಆರ್. ಪಾಟೀಲ್ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಿಂದ ಕೌಶಲ್ಯ ತರಬೇತಿ ಪಡೆದ ಮಹಿಳಾ ಉದ್ದಿಮೆದಾರರ ಹಾಗೂ ಅನುಭವಾತ್ಮಕ ಕಲಿಕೆಯ ವಿದ್ಯಾರ್ಥಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಮಳಿಗೆಯನ್ನು ಉದ್ಘಾಟಿಸಿದರು. ಡಾ. ಉಮಾ .ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ಸರೋಜನಿ ಕರಕ್ಕಣ್ಣವರ, ಡಾ. ಕಸ್ತೂರಿಬಾ ಬಿ. ರಾಜೇಶ್ವರಿ ಕುರಬೇಟ್ಟ ಉಪಸ್ಥಿತರಿದ್ದರು. ತರಬೇತಿಯಲ್ಲಿ ನವಣೆ, ಸಾವೆ, ಹಾರಕ ಮುಂತಾದ ಸಿರಿಧಾನ್ಯಗಳನ್ನು ಉದ್ದು, ಹೆಸರು ಹಾಗೂ ಅಲಸಂದಿ ಬೆರೆಸಿದ ವಿವಿಧ ರಿತಿಯ ಹಪ್ಪಳ ತಯಾರಿಕೆಯ ಪ್ರಾತ್ಯಕ್ಷಿಕೆಗಳನ್ನು ನೀಡಲಾಯಿತು.

loading...