ಯಕ್ಸಂಬಾದಲ್ಲಿ ಸೇವಾ ನಿವೃತ್ತ ಹೆಡ್‍ಮಾಸ್ಟರ್ ಸನ್ಮಾನ

0
25

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 01: ತಾಲೂಕಿನ ಯಕ್ಸಂಬಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಪ್ರಧಾನ ಗುರು ದುಂಡಪ್ಪಾ ನರಸಪ್ಪಾ ಕೋಳಿ ಸೇವೆಯಿಂದ ನಿವೃತ್ತರಾದ ನಿಮಿತ್ತ ಶಾಲೆಯ ಪ್ರಭಾರಿ ಪ್ರಧಾನ ಗುರು ಆರ್.ಎಸ್. ಮಡಿವಾಳೆ, ಸಹಶಿಕ್ಷಕರು ಹಾಗೂ ಸಿ.ಆರ್.ಸಿಯ ಮುಖ್ಯಸ್ಥರು ಆತ್ಮೀಯವಾಗಿ ಸತ್ಕರಿಸಿ ಬೀಳ್ಕೊಟ್ಟರು.
ಸಹಶಿಕ್ಷಕಿ ಎಸ್.ಕೆ. ಬಸಲಿಂಗಗೋಳ ಮಾತನಾಡಿ, ಸರಳ, ಸಜ್ಜನಿಕೆ, ಪ್ರಾಮಾಣಿಕ ಕಾರ್ಯವೈಖರಿ ಹೊಂದಿರುವ ಶಿಕ್ಷಕ ಕೋಳಿ ಅವರು 1978ರಿಂದ ಸೇವೆಗೆ ಸೇರಿ ಸುಮಾರು 40 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಅವರ ಬೌದ್ಧಿಕ ಸಾಮಥ್ರ್ಯ ಹೆಚ್ಚಿಸುವಲ್ಲಿ ಹೆಚ್ಚಿನ ಒಲವು ತೋರಿಸಿ ವಿದ್ಯಾರ್ಥಿಗಳ ಸರ್ವತೋಮುಖ ಏಳ್ಗೆಗೆ ಶ್ರಮವಹಿದ್ದಾರೆಂದರು.
ಪ್ರಧಾನಗುರು ಎಸ್.ಎಸ್. ಶಿವಾಯಗೋಳ ಸಮಾರಂಭದ ಅಧ್ಯಕ್ಷತೆವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಿ.ಆರ್.ಸಿಯ ಮುಖ್ಯಸ್ಥರಾದ ಆರ್.ಆರ್. ಖೈರಮೋಡೆ, ಎಸ್.ಎಸ್. ಧುಪದಾಳ, ಎಸ್.ವಾಯ್. ಮುಗಳೆ, ಎಸ್.ಎಂ. ಮಾನೆ, ಡಿ.ಎಚ್. ಕಾಂಬಳೆ ಹಾಗೂ ಪಟ್ಟಣದ ಎಲ್ಲ ಸರ್ಕಾರಿ ಹಿರಿಯ ಹಾಗೂ ಕಿರಿಯ ಶಾಲೆಯ ಪ್ರಧಾನ ಗುರುಗಳು ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ಎಸ್.ಬಿ.ಕಬ್ಬೂರಿ ಸ್ವಾಗತಿಸಿದರು. ಎಸ್. ಎಂ. ಮಸ್ತೆ ನಿರೂಪಿಸಿದರು. ಎಸ್.ಬಿ. ಹಿರೇಮಠ ವಂದಿಸಿದರು.
..

loading...