ಯಲಬುರ್ಗಾ ಪಟ್ಟಣ ಪಂಚಾಯತಿ ಚುನಾವಣೆ: ಶೇ.77.44ರಷ್ಟು ಮತದಾನ

0
1
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಲಬುರ್ಗಾದ ಪಟ್ಟಣ ಪಂಚಾಯತಿ ಚುನಾವಣೆ ಕೆಲವು ಕಡೆ ಸಣ್ಣ ಪುಟ್ಟ ಘಟನೆಗಳು ಹೊರತಾಗಿ ಬಹುತೇಕ ಶಾಂತಿಯತವಾಗಿ ಚುನಾವಣೆ ಶುಕ್ರವಾರ ಜರಗಿತು. ಶೇ.77.44ರಷ್ಟು ಮತದಾನವಾಯಿತು.
ಯಲಬುರ್ಗಾ ಪಟ್ಟಣ ಪಂಚಾಯತಿಗೆ ಒಟ್ಟು 44 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಈ ಹಿಂದೆ 11 ವಾರ್ಡುಗಳನ್ನು ಹೊಂದಿದ್ದ ಯಲಬುರ್ಗಾ ಪಪಂ ಈಗ ಒಟ್ಟು 15ನೇ ವಾರ್ಡುಗಳನ್ನು ಹೊಂದಿದೆ. ಪಟ್ಟಣದಲ್ಲಿ 5411 ಪುರುಷ,ಹಾಗು 5716 ಮಹಿಳಾ ಸೇರಿ ಒಟ್ಟು 11127 ಮತದಾರರನ್ನು ಹೊಂದಿರುವ ಯಲಬುರ್ಗಾ ಪಪಂ ಚುನಾವಣೆ ಶುಕ್ರವಾರ ನಡೆದ ಮತದಾನವು ಬೆಳಿಗ್ಗೆಯಿಂದಲೇ ಪಟ್ಟಣದ ಬಹುತೇಕ ಮತದಾರರು ತಮ್ಮ ಮತ ಚಲಾಯಿಸುವಲ್ಲಿ ಬಾರಿ ಉತ್ಸಾಹದೊಂದಿಗೆ ಆಯಾ ಮತಗಟ್ಟಿಯಲ್ಲಿ ಸಾಲು ಸಾಲಾಗಿ ನಿಂತಿದ್ದ ದೃಶ್ಯ ಪ್ರತಿಯೊಂದು ಕೇಂದ್ರದಲ್ಲಿ ಕಂಡು ಬಂತು.
ಚುರುಕಿನಿಂದ ಕೆಲವಡೆ ಸಾಲು ಸಾಲಾಗಿ ನಿಂತು ತಮ್ಮ ಮತ ಚಲಾಯಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂತು.ಅಲ್ಲದೇ ಕೆಲವೊಂದು ಬೂತನಲ್ಲಿ ಪುರುಷರಿಗಿಂತಲೂ ಮಹಿಳಾ ಮತದಾರರ ಸಂಖ್ಯೆ ಮತದಾನ ಮಾಡಿದ್ದು ಕಂಡು ಬಂದಿದ್ದು ಒಂದು ವಿಶೇಷ ಎನ್ನಬಹುದು. 12ನೇ ವಾರ್ಡಿನಲ್ಲಿ ನನ್ನ ಹೆಸರಿನಲ್ಲಿ ಮತ್ತೊಬ್ಬರು ಬಂದು ಖೋಟ ಮತದಾನವನ್ನು ಮಾಡಿ ಹೋಗಿದ್ದಾರೆ.ನನಗೆ ಮತದಾನ ಮಾಡಲಿಕ್ಕೆ ಬರಲಿಲ್ಲಾ.ಇದು ಇಲ್ಲಿಯ ಏಜೇಂಟರ ಮತ್ತು ಅಧಿಕಾರಿಗಳ ತಪ್ಪಿನಿಂದ ಮತ ಚಲಾಯಿಸುವ ಹಕ್ಕನ್ನು ಕಳೆದುಕೊಳ್ಳಬೇಕಾಯಿತು ಎಂಉ ಬಾನುಬೇಗಂ ಅಧಿಕಾರಿಗಳ ಜತೆ ತಮ್ಮ ಅಳಲನ್ನು ತೊಡಿಕೊಂಡರು.
ಒಟ್ಟಿನಲ್ಲಿ ಸ್ಥಳಿಯ ಪಟ್ಟಣ ಪಂಚಾಯತಿ ಚುನಾವಣೆಯು ಶಾಂತಿಯುತವಾಗಿ ಜರಗಿತು. ಯಾವುದೇ ಅಹಿತಕರ ಘಟನೆ ಜರಗದಂತೆ ಸಿಪಿಐ ರಮೇಶ ರೋಟ್ಟಿ ಅವರ ಮಾರ್ಗದರ್ಶನದಲ್ಲಿ ಯಲಬುರ್ಗಾ ಬೇವೂರು ಕೂಕನೂರು ಪಿಎಸ್‌ಐ,ಸೇರಿದಂತೆ ಪೋಲೀಸ್‌ ಮತ್ತು ಗೃಹರಕ್ಷಕದಳ ಸಿಬ್ಬಂದಿಗಳನ್ನು ಸೂಕ್ತ ಬಂದೊಬಸ್ತನ್ನು ಏರ್ಪಡಿಸಿದ್ದರು.

loading...