ಯಶಸ್ವಿಯಾಗಿ ಪ್ರಯೋಗ ಕಂಡ ರಂಗರೂಪಕ

0
6
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಮಹಾತ್ಮಾ ಗಾಂಧೀಜಿಯವರಿಗೆ 150 ವರ್ಷ ತುಂಬಿರುವ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಧಾರವಾಡದ ರಂಗಾಯಣದ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ’ ಎಂಬ ರಂಗರೂಪಕ ದಾಂಡೇಲಿಯ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಮಹಾ ವಿದ್ಯಾಲಯದಲ್ಲಿ ಯಶಸ್ವಿಯಾಗಿ ಪ್ರಯೋಗ ಕಂಡಿತು.
ದಾಂಡೇಲಿಯಲ್ಲಿ ಇವರ ಮೊದಲ ಪ್ರಯೋಗ ಜನತಾ ವಿದ್ಯಾಲಯ ಪ.ಪೂ ಕಾಲೇಜಿನ ನೇತೃತ್ವದಲ್ಲಿ ರಾಮರೆಡ್ಡಿ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಎಮ್.ಎಸ್. ಇಟಗಿಯವರು ಉಪಸ್ಥಿತರಿದ್ದು, ನಾಟಕ ವೀಕ್ಷಿಸಿ ಇದೊಂದು ತಮ್ಮ ಕಾಲೇಜಿನ ಮಕ್ಕಳಿಗೆ ಉತ್ತಮವಾದ ಅವಕಾಶವಾಗಿದೆ ಎಂದರು. ಕಲಾವಿದರನ್ನು ಅಭಿನಂದಿಸಿದರು. ದಾಂಡೇಲಿಯಲ್ಲಿ ಈ ರಂಗ ರೂಪಕ ಸಂಘಟಕರಾದ ಒಡನಾಡಿಯ ಅಧ್ಯಕ್ಷ ಬಿ.ಎನ್. ವಾಸರೆ ಉಪಸ್ಥಿತರಿದ್ದರು. ಉಪನ್ಯಾಸಕರಾದ ಉಪೇಂದ್ರ ಘೋರ್ಪಡೆ ಸ್ವಾಗತಿಸಿ, ನಿರೂಪಿಸಿದರು. ಉಪನ್ಯಾಸಕರಾದ ಜಿ.ಎಸ್. ಹೆಗಡೆ, ನಿರುಪಮಾ ನಾಯಕ ಮುಂತಾದವರು ಸಹಕರಿಸಿದರು. ನಗರದ ಸರಕಾರಿ ಮಹಾವಿದ್ಯಾಲಯದ ಅಶ್ರಯದಲ್ಲಿ ಅಂಬೇಡ್ಕರ ಸಭಭವನದಲ್ಲಿ ನಡೆದ ಎರಡನೇ ಪ್ರಯೋಗ ನಡೆಯಿತು. ನಾಟಕ ವೀಕ್ಷಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಎಮ್.ಡಿ. ಒಕ್ಕುಂದರವರು ಇಂದು ಗಾಂಧಿ ತತ್ವಗಳನ್ನು, ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾದ ಅತ್ಯತೆಯಿದೆ. ಆ ನಿಟ್ಟಿನಲ್ಲಿ ರಂಗಾಯಣ ಕಲಾವಿದರ ಈ ರಂಗ ರೂಪಕ ಅತ್ಯಂತ ಮಹತ್ವದ್ದಾಗಿದೆ. ಕಲಾವಿದರು ಅದ್ಭುತ ಪ್ರದರ್ಶನ ನೀಡಿದ್ದಾರೆಂದರು. ಉಪನ್ಯಾಸಕಿ ಡಾ. ವಿನಯಾ ಒಕ್ಕುಂದ ನಾಟಕದ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿ ಇಂದಿನ ಸಂಘರ್ಷದ ಸೂಕ್ಷ್ಮ ಕಾಲಘಟ್ಟದಲ್ಲಿ ಇಂತಹ ನಾಟಕಗಳ ಮೂಲಕ ನಾವು ಸಮತೆಯ ಬದುಕು ಕಟ್ಟಿಕೊಳ್ಳುವತ್ತ ಹೆಜ್ಜೆಯಿಡಬೇಕಾಗಿದೆ ಎಂದರು. ದಾಂಡೇಲಿಯಲ್ಲಿ ಈ ರಂಗ ರೂಪಕ ಸಂಘಟನೆಯ ಸಾರಥ್ಯ ವಹಿಸಿದ್ದ ಒಡನಾಡಿ ಅಧ್ಯಕ್ಷ ಬಿ.ಎನ್. ವಾಸರೆ ಹಾಗೂ ಕಾಲೇನ ಉಪನ್ಯಾಸಕರು ಉಪಸ್ಥಿತರಿದ್ದರು.
ಸಾಹಿತಿ ಬೋಳುವಾರು ಮಹಮ್ಮದ್ ಕುಂಞÂ ಅವರ ಕಥೇಯಾರಿದ ರಂಗ ರೂಪಕ ಇದಾಗಿದ್ದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ನಾಟಕವನ್ನು ಡಾ. ಶ್ರೀಪಾದ ಭಟ್ಟ ನಿರ್ದೇಶಿಸಿದ್ದಾರೆ. ಧರವಾಡ ಮೂಲಕ ದಾಂಡೇಲಿಗಾಗಮಿಸಿದ್ದ ಈ ತಂಡದ ನೇತೃತ್ವವನ್ನು ಮದ್ವರಾಜ ವಹಿಸಿದ್ದರು. ತಂಡದಲ್ಲಿ 15ಕ್ಕೂ ಹೆಚ್ಚು ಕಲಾವಿದರಿದ್ದು ಅವರೆಲ್ಲರೂ ಗಾಂದೀಜಿಯ ಬಾಲ್ಯದಿಂದ ಹಿಡಿದು, ಆಪ್ರಿಕಾದಲ್ಲಿ ಅವರ ಶಿಕ್ಷಣ, ಹೋರಾಟ, ದೇಶದ ಸ್ಬಾತಂತ್ರ್ಯ ಹೋರಾಟದಲ್ಲಿ ಅವರ ನಾಯಕತ್ವ, ಸತ್ಯಾಗ್ರಹ, ಅಸ್ಪøಶ್ಯತೆ ನಿವಾರಣೆಗಾಗಿ ಅವರ ಹೋರಾಟ ದೇಶ ವಿಭಜನೆ ಮತ್ತು ಧರ್ಮ ಸಂಘರ್ಷಕ್ಕೆ ಅವರ ಆತಂಕ, ಹಾಗೂ ಅಂತಿಮವಾಗಿ ಅವರ ಅಂತ್ಯ ಇವೆಲ್ಲವನ್ನೂ ಸಮಗ್ರವಾಗಿ, ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಕೇವಲ ಒಂದು ಕಾಲು ಗಂಟೆಯಲ್ಲಿ ಈ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ.

loading...