ರಕ್ತದಲ್ಲಿ ವಾಜಪೇಯಿ ಚಿತ್ರ: ವಿಭಿನ್ನರೀತಿಯ ಶೃದ್ಧಾಂಜಲಿ

0
6
loading...

ಜಮಖಂಡಿ: ತಮ್ಮ ಸ್ವಂತ ರಕ್ತದಿಂದ ಅಜಾತ ಶತ್ರು, ಶಿಕ್ಷಣ ಪ್ರೆÃಮಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರ ಬಿಡಿಸಿ ವಿಭಿನ್ನರೀತಿಯಲ್ಲಿ ಶೃದ್ಧಾಂಜಲಿ ಅರ್ಪಿಸಿದ ಕಲಾವಿದ ಡಾ. ಸಂಗಮೇಶ ಬಗಲಿ. ತಾಲೂಕಿನ ತುಬಚಿ ಗ್ರಾಮದ ಸರಕಾರಿ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ರಕ್ತ ಕಲಾವಿದರೆಂದೆ ಹೆಸರುವಾಸಿಯಾಗಿರುವ ಡಾ. ಸಂಗಮೇಶ ಬಗಲಿ ನಗರದಲ್ಲಿರುವ ತಮ್ಮ ಸಂಗಮೇಶ ಆರ್ಟ ಗ್ಯಾಲರಿಯಲ್ಲಿ ತಮ್ಮ ಸ್ವಂತ ರಕ್ತದಿಂದ ದಿ. ಅಟಲ್‌ಜಿಯವರ ಭಾವಚಿತ್ರ ಬಿಡಿಸಿ ಮಾತನಾಡಿ ದಿ.ಅಟಲ್‌ಜಿಯವರ ಶಿಕ್ಷಣದ ಪ್ರೆÃಮ ಇಂದು ಇಡೀ ರಾಷ್ಟçದಲ್ಲಿನ ಶಾಲೆಗಳು ಹೊಸ ಕಟ್ಟಡ ಪಡೆದು ನಳ-ನಳಿಸುತ್ತಿರಲು ಕಾರಣ ದಿ.ಅಟ¯ಜಿಯವರ ಕಲ್ಪನೆಯ ಕೂಸು ಸರ್ವ ಶಿಕ್ಷಣ ಅಭಿಯಾನ. ಇವರು ಪ್ರಧಾನಿಯಾಗುವದಕ್ಕಿಂತಲೂ ಪೂರ್ವದಲ್ಲಿ ಶಾಲೆಯ ಕಟ್ಟಡಗಳ ಪರಿಸ್ಥಿತಿ ಅದೊಗತಿಯಲ್ಲಿತ್ತು ಮುರುಕಲು ಜೋಪಡಿಗಳು ಮಕ್ಕಳು ಕಲಿಯುವ ಪಾಠಶಾಲೆಯ ಕೋಣೆಗಳಾಗಿದ್ದವು. ಇದನ್ನು ಅರಿತ ಶಿಕ್ಷಣ ಪ್ರೆÃಮಿ ದಿ. ಅಟಲ್‌ಜಿ ದೇಶದ ಪ್ರಧಾನಿಯಾದ ನಂತರ ನಮ್ಮ ಸರಕಾರಿ ಶಾಲೆಗಳಿಗೆ ಹೊಸಕಟ್ಟಡಗಳನ್ನು ನೀಡಿ ಮಕ್ಕಳಿಗೆ ಖುಷಿಯಿಂದ ಪಾಠ ಕಲಿಯಲು ಮೆರಗು ನೀಡಿದ ಶಿಕ್ಷಣ ಪ್ರೆÃಮಿಗೆ ಇಡೀ ದೇಶದ ಶಿಕ್ಷಕರು ಹಾಗೂ ಸರಕಾರಿ ಶಾಲೆಯ ಮಕ್ಕಳ ಪರವಾಗಿ ಶೃದ್ಧಾಂಜಲಿ ಸಲ್ಲಿಸುತ್ತಿದ್ದೆÃನೆ ಎಂದರು.

loading...